ಭೋಪಾಲ್: ಮದುವೆಗೆ ಮುನ್ನ ಮದುಮಗಶೌಚಾಲಯದಲ್ಲಿ ಸೆಲ್ಫಿ ಕ್ಲಿಕ್ ಮಾಡಿದರೆ ಮದುವೆಯಾದ ನಂತರ ವಧುವಿಗೆ₹51000 ನೀಡುವ ಹೊಸ ಯೋಜನೆಯೊಂದನ್ನು ಮಧ್ಯಪ್ರದೇಶ ಸರ್ಕಾರ ಜಾರಿಗೆ ತಂದಿದೆ.
ರಾಜ್ಯದಲ್ಲಿರುವ ಎಲ್ಲ ಮನೆಗಳು ಶೌಚಾಲಯ ಹೊಂದಿರಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಕನ್ಯಾ ವಿವಾಹ/ ನಿಖಾ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಯೋಜನೆ ಪ್ರಕಾರ ಆರ್ಥಿಕವಾಗಿ ಹಿಂದುಳಿದಿರುವ ವಿಭಾಗದ ವಧುಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.
ಮದುವೆಗೆ ಮುನ್ನ ವರನ ಮನೆಯಲ್ಲಿ ಶೌಚಾಲಯ ಇದೆ ಎಂದು ಖಾತರಿ ಪಡಿಸಬೇಕು. ಅಷ್ಟೇ ಅಲ್ಲದೆ ಅದೇ ಶೌಚಾಲಯದೊಳಗೆ ನಿಂತು ವರ ಸೆಲ್ಫಿ ಕ್ಲಿಕ್ ಮಾಡಬೇಕು.
ಯೋಜನೆಯ ಫಲಾನುಭವಿ ಆಗಬೇಕಿದ್ದರೆ ವಧು ಎರಡು ಅಫಿಡವಿಟ್ ಮತ್ತು ಶೌಚಾಲಯದೊಳಗೆ ವರ ಕ್ಲಿಕ್ಕಿಸಿದ ಸೆಲ್ಫಿ ಲಗತ್ತಿಸಿ ಅರ್ಜಿಯೊಂದನ್ನ ಮುನ್ಸಿಪಲ್ ಕಾರ್ಪೊರೇಷನ್‌ಗೆ ಸಲ್ಲಿಸಬೇಕು.
ಅರ್ಜಿ ಜತೆ ಫೋಟೊ ಲಗತ್ತಿಸದೇ ಇದ್ದರೆ ಸಮ್ಮೇಳನ್‌ನಲ್ಲಿ ಮದುವೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಮಿತಿಯ ಮುಖ್ತಾರ್ ಹಸನ್ ಹೇಳಿದ್ದಾರೆ.
ಅದೇ ವೇಳೆ ಕಳೆದ ಫೆಬ್ರುವರಿಯಿಂದ ಈ ಯೋಜನೆಯಡಿಯಲ್ಲಿ ಹಲವಾರು ದಂಪತಿಗಳಿಗೆ ಹಣ ಸಿಕ್ಕಿಲ್ಲ ಎಂದು ಅಲ್ಲಿನ ಸ್ಥಳೀಯರು ದೂರಿದ್ದಾರೆ.
ಫೆಬ್ರುವರಿ ತಿಂಗಳಿನಿಂದ ಇಲ್ಲಿಯವರೆಗೆ ನಗರದಲ್ಲಿ 600-700 ಜೋಡಿಗಳ ಮದುವೆಯಾಗಿದ್ದರು. ಅವರಿಗೆ ಈವರೆಗೆ ಹಣ ಸಿಕ್ಕಿಲ್ಲ ಎಂದು ಹಸನ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.