ADVERTISEMENT

ಮಧ್ಯಪ್ರದೇಶ ನರ್ಸಿಂಗ್ ಕಾಲೇಜು ಹಗರಣ: CBI ಇನ್‌ಸ್ಪೆಕ್ಟರ್‌ ಬಂಧನ, ಸೇವೆಯಿಂದ ವಜಾ

ಪಿಟಿಐ
Published 22 ಮೇ 2024, 9:57 IST
Last Updated 22 ಮೇ 2024, 9:57 IST
<div class="paragraphs"><p>ಸಿಬಿಐ ಕಚೇರಿ</p></div>

ಸಿಬಿಐ ಕಚೇರಿ

   

ಭೋಪಾಲ್: ಮಧ್ಯಪ್ರದೇಶದ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇನ್‌ಸ್ಪೆಕ್ಟರ್‌ ರಾಹುಲ್ ರಾಜ್ ಅವರನ್ನು ಬಂಧಿಸಲಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸಿಬಿಐ ತಿಳಿಸಿರುವುದಾಗಿ ಪಿಟಿಐ ಮೂಲಗಳು ಖಚಿತಪಡಿಸಿವೆ

ಮಧ್ಯಪ್ರದೇಶದ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಯ ಹೊಣೆ ಹೊತ್ತಿದ್ದ ಇನ್‌ಸ್ಪೆಕ್ಟರ್‌ ರಾಹುಲ್ ಅವರು, ಆರೋಪ ಹೊತ್ತಿರುವ ಕಾಲೇಜುಗಳಿಂದ ತಲಾ ₹2ಲಕ್ಷದಿಂದ ₹10ಲಕ್ಷವರೆಗೆ ಲಂಚ ಪಡೆದಿರುವ ಆರೋಪ ಹೊತ್ತಿದ್ದರು ಎಂದು ಸಿಬಿಐ ಹೇಳಿದೆ.

ADVERTISEMENT

ಈ ಪ್ರಕರಣದಲ್ಲಿ ಸಿಬಿಐ ಇನ್‌ಸ್ಪೆಕ್ಟರ್ ಮಾತ್ರವಲ್ಲ, 8 ವಿವಿಧ ಕಾಲೇಜುಗಳ ನಿರ್ದೇಶಕರು ಹಾಗೂ ಅಧ್ಯಕ್ಷರ ಹೆಸರುಗಳೂ ಎಫ್‌ಐಆರ್‌ನಲ್ಲಿದೆ. ಇವರೊಂದಿಗೆ ಕಾಲೇಜುಗಳ ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಆರ್‌.ಡಿ.ಸ್ಮಾರಕ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜಿನ ಅಧ್ಯಕ್ಷ ರವಿ ಭಡೋರಿಯಾ, ಗ್ವಾಲಿಯರ್‌ ಮೂಲದ ಭಾಸ್ಕರ ನರ್ಸಿಂಗ್ ಕಾಲೇಜಿನ ನಿರ್ದೇಶಕ, ಜುಗಾಲ್ ಕಿಶೋರ್ ಶರ್ಮಾ, ಭೋಪಾಲ್ ಮೂಲದ ಭಾಬಾ ವಿಶ್ವವಿದ್ಯಾಲಯದ ಪ್ರಾಚಾರ್ಯ ಜಲ್‌ಪಾನಾ ಅಧಿಕಾರಿ ಮತ್ತು ಪ್ರತ್ಯಾಂಶ್ ನರ್ಸಿಂಗ್ ಕಾಲೇಜಿನ ಓಂ ಗೋಸ್ವಾಮಿ ಸೇರಿದ್ದಾರೆ ಎಂದು ಸಿಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.