ಭೋಪಾಲ್: ಮಧ್ಯಪ್ರದೇಶಲ್ಲಿ ನೂರರಷ್ಟು ಸೀಟುಗಳ ಮತ ಎಣಿಕೆಯ ಮೊದಲ ಫಲಿತಾಂಶ ಬಂದಾಗ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.ಈ ಚುನಾವಣೆಯಲ್ಲಿ ಮಧ್ಯಪ್ರದೇಶದ ಚುನಾವಣೆ ಫಲಿತಾಂಶ ನಿರ್ಣಾಯಕ ಆಗಲಿದೆ. 5 ಕೋಟಿಯಷ್ಟು ಮತದಾರರಿರುವ ಮಧ್ಯಪ್ರದೇಶದಲ್ಲಿನ ವಿಧಾನಸಭಾ ಚುನಾವಣೆ ಫಲಿತಾಂಶ, ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ.
ಅಧಿಕಾರಕ್ಕೇರಲು ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಒಂದೆಡೆಯಾದರೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆಯನ್ನು ಬಳಸಿ ಬಿಜೆಪಿ ಅಧಿಕಾರ ಉಳಿಸುವ ಪ್ರಯತ್ನ ಮಾಡುತ್ತಿದೆ.
15 ವರ್ಷದ ಬಿಜೆಪಿ ಅಧಿಕಾರದ ವಿರುದ್ಧ ರೈತರು, ದಲಿತರು, ಹಿಂದುಳಿದ ವರ್ಗದವರು ಮತ್ತು ಸಣ್ಣ ಉದ್ಯಮದಾರರು ಒಂದಾಗಿ ಆ ಶಕ್ತಿ ಮತವಾಗಿ ಬದಲಾದರೆ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಕನಸು.ಆದರೆ ಚೌಹಾಣ್ ಜನಪ್ರಿಯತೆ ಮತ್ತು ಜನರಿಗೆ ಬಿಜೆಪಿ ಮೇಲಿರುವ ವಿಶ್ವಾಸಕ್ಕೆ ಧಕ್ಕೆಯಾಗಿಲ್ಲ ಎಂಬ ನಂಬಿಕೆಯಿಂದಿದೆ ಬಿಜೆಪಿ.
ಈಗಲೇ ಎಲ್ಲವನ್ನೂ ನಿರ್ಧರಿಸುವುದು ಕಷ್ಟ, ಮಧ್ಯಾಹ್ನ 12 ಗಂಟೆ ನಂತರವೇ ಈ ಬಗ್ಗೆ ಹೇಳಲಾಗುವುದು. ಪೋಸ್ಟಲ್ ಮತದಲ್ಲಿನ ಮುನ್ನಡೆ ಮಾತ್ರ ಈಗ ಬಂದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂಬ ನಂಬಿಕೆ ಇದೆ ಎಂದು ಕಾಂಗ್ರೆಸ್ ನೇತಾರದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.