ADVERTISEMENT

ಮಹಾರಾಷ್ಟ: 18 ವರ್ಷಕ್ಕೂ ಮೊದಲೇ ತಾಯಿಯಾದ 15,253 ಮಂದಿ!

ಪಿಟಿಐ
Published 21 ಮಾರ್ಚ್ 2023, 13:22 IST
Last Updated 21 ಮಾರ್ಚ್ 2023, 13:22 IST
   

ಮುಂಬೈ: ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ಮೂರು ವರ್ಷಗಳಲ್ಲಿ 15,253 ಮಂದಿ 18 ವರ್ಷ ತುಂಬುವ ಮೊದಲೇ ತಾಯಂದಿರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್‌ ಪ್ರಭಾತ್‌ ಲೋಧಾ ಮಂಗಳವಾರ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, ಮಾಹಿತಿ ಕಲೆಹಾಕಲು ಇಲಾಖೆ ಸಮಿತಿ ರಚಿಸಿತ್ತು. 2019 ಮತ್ತು 2021ರ ಅವಧಿಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 152 ಮೊಕದ್ದಮೆ ಹೂಡಿದ್ದು, 136 ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ತಿಳಿಸಿದ್ದಾರೆ.

ಬಾಲಕಿಯರ ಮದುವೆ ಕೆಲ ಬುಡಕಟ್ಟು ಜನರ ಸಂಪ್ರದಾಯದಂತೆಯೇ ಆಗಿದೆ. ಇಂಥ ಪ್ರಕರಣಗಳನ್ನು ಗುರುತಿಸುವುದೇ ಕಷ್ಟಕರವಾಗಿದೆ. ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯ ಪ್ರಕಾರ, ಕೇರಳದ ನಂತರದ ಮಹಾರಾಷ್ಟ್ರದಲ್ಲಿಯೇ ಬಾಲಕಿಯರ ಮದುವೆ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.