ADVERTISEMENT

ಕಟ್ಟಡ ಕುಸಿದ ಪ್ರಕರಣ: ಬಾಲಕ ರಕ್ಷಣೆ ಮೃತರ ಸಂಖ್ಯೆ 8ಕ್ಕೆ ಏರಿಕೆ

ಪಿಟಿಐ
Published 25 ಆಗಸ್ಟ್ 2020, 13:00 IST
Last Updated 25 ಆಗಸ್ಟ್ 2020, 13:00 IST
ರಾಯಘರ್ ಜಿಲ್ಲೆಯಲ್ಲಿ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ಮಂಗಳವಾರವೂ ನಡೆಯಿತು
ರಾಯಘರ್ ಜಿಲ್ಲೆಯಲ್ಲಿ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ಮಂಗಳವಾರವೂ ನಡೆಯಿತು   

ಮುಂಬೈ: ರಾಯಗಡಜಿಲ್ಲೆಯಲ್ಲಿ ಐದು ಮಹಡಿಗಳ ಕಟ್ಟಡ ಕುಸಿದ ಪ್ರಕರಣದಲ್ಲಿ ರಕ್ಷಣಾ ಸಿಬ್ಬಂದಿ ಮಂಗಳವಾರ ಐದು ವರ್ಷದ ಬಾಲಕನನ್ನು ರಕ್ಷಿಸಿದ್ದು, ಆತನ ತಾಯಿಯ ಶವ ಅವಶೇಷಗಳಡಿ ಪತ್ತೆಯಾಗಿದೆ.

ಮೃತಳನ್ನು ನೌಶಿನ್ ಎಂದು ಗುರುತಿಸಲಾಗಿದೆ. ಇದರೊಂದಿಗೆ ಅವಘಡದಲ್ಲಿ ಮೃತರ ಸಂಖ್ಯೆ ಎಂಟಕ್ಕೆ ಏರಿದೆ. ಇನ್ನು 10 ಜನ ಪತ್ತೆಯಾಗಬೇಕಿದೆ. ಸುಮಾರು 47 ವಸತಿಗಳಿದ್ದ ಸಮುಚ್ಚಯ ಸೋಮವಾರ ರಾತ್ರಿ ಕುಸಿದಿತ್ತು.

ಕುಸಿದ ಕಟ್ಟಡದ ಕಲ್ಲು ಚಿಮ್ಮಿ ಆಗಿದ್ದ ಪೆಟ್ಟಿನ ಹಿಂದೆಯೇ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಸೋಮವಾರ ರಾತ್ರಿಯೇ ಸತ್ತಿದ್ದರು. ಉಳಿದಂತೆ ಅವಶೇಷಗಳಡಿ ಸಿಕ್ಕಿಬಿದ್ದಿದ್ದ ಹತ್ತು ಜನರನ್ನು ಇದುವರೆಗೂ ರಕ್ಷಿಸಲಾಗಿದೆ.

ADVERTISEMENT

ಕಟ್ಟಡ ನಿರ್ಮಾಣಗಾರ ಫರೂಕ್ ಕಾಜಿ, ಆರ್.ಸಿ.ಸಿ ಕನ್ಸಲ್ಟಂಟ್ ಬಾಹುಬಲಿ ಧಾಮ್ನೆ, ವಾಸ್ತುಶಿಲ್ಪಿ ಗೌರವ್ ಶಾ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸೂಚನೆಯ ಮೇರೆಗೆ ಸಚಿವ ಏಕನಾಥ್ ಶಿಂಧೆ ಅವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದ ಮೇಲ್ವಿಚಾರಣೆ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.