ನಾಗ್ಪುರ (ಪಿಟಿಐ): ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿಗೆ ಹಲವಾರು ಬಾರಿ ಕರೆ ಮಾಡಿರುವ ‘ಎಯು’ ಎಂಬ ವ್ಯಕ್ತಿ ಯಾರು ಎಂಬುದರ ಪತ್ತೆಗೆ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಸದಸ್ಯರು ಗುರುವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣದ ಶಿವಸೇನಾ ಸಂಸದ ರಾಹುಲ್ ಶೆವಾಲೆ ಅವರು, ಬುಧವಾರ ಲೋಕಸಭೆಯಲ್ಲಿ ಸುಶಾಂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಯ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಕೇಳಿದ್ದರು. ಬಳಿಕ ‘ಎಯು’ ಹೆಸರಿನಿಂದ ಹಲವು ಬಾರಿ ರಿಯಾ ಅವರಿಗೆ ದೂರವಾಣಿ ಕರೆಗಳು ಬಂದಿರುವುದಾಗಿ ಹೇಳಿದ್ದರು.
ಗುರುವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಿಂದೆ ಬಣದ ಶಾಸಕ ಪ್ರತಾಪ್ ಸರ್‌ನಾಯಕ್ ಅವರು, ‘ರಿಯಾ ಅವರಿಗೆ ಎಯುನಿಂದ ಒಟ್ಟು 44 ಕರೆಗಳು ಬಂದಿರುವುದಾಗಿ ಶೆವಾಲೆ ಹೇಳಿದ್ದಾರೆ’ ಎಂದರು. ಬಳಿಕ, ಬಿಜೆಪಿ ಮತ್ತು ಶಿಂದೆ ಬಣದ ಸದಸ್ಯರು ‘ಎಯು ಯಾರು?’ ಎಂದು ಬರೆದಿರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.