ಮುಂಬೈ:ಮಹಾರಾಷ್ಟ್ರದ ಶಿವಸೇನಾ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಶಿವಸೇನಾದ 40 ಶಾಸಕರ ಬೆಂಬಲ ಇರುವುದಾಗಿ ಶಿವಸೇನಾ ಬಂಡಾಯ ಗುಂಪಿನ ನಾಯಕ ಏಕನಾಥ ಶಿಂಧೆ ಶುಕ್ರವಾರ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಅಳಿವು-ಉಳಿವಿನ ಸವಾಲನ್ನು ಎದುರಿಸುತ್ತಿದ್ದು, ರಾಜಕೀಯ ಬಿಕ್ಕಟ್ಟು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬಂಡಾಯ ಗುಂಪಿನ ಶಾಸಕರು ಗುಜರಾತ್‌ನ ಸೂರತ್, ಅಸ್ಸಾಂನಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.
ಶಿವಸೇನಾದ 40ಕ್ಕೂ ಹೆಚ್ಚು ಶಾಸಕರುಹಾಗೂ 12 ಪಕ್ಷೇತರರ ಬೆಂಬಲ ಇರುವುದಾಗಿ ಶಿಂಧೆ ಹೇಳಿದ್ದಾರೆ.
ಶಿವಸೇನಾದ ಬಂಡಾಯ ಶಾಸಕರು ಮುಂಬೈಗೆ ಬಂದು ರಾಜ್ಯಪಾಲರು ಅಥವಾ ಸದನದ ಮುಂದೆ ಬಲವನ್ನು ಸಾಬೀತು ಮಾಡುವಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್ ಸವಾಲು ಹಾಕಿದ್ದರು.
'ನಾವು ಇಂತಹ ಬೆದರಿಕೆಗಳಿಗೆ ಮಣಿಯುವುದಿಲ್ಲ. ನಾವು ಏನೇ ಮಾಡಿದರೂ ಸಂಪೂರ್ಣ ಕಾನೂನುಬದ್ಧವಾಗಿರುತ್ತದೆ. ಎಲ್ಲ ಶಾಸಕರು ಸ್ವಇಚ್ಛೆಯಿಂದ ನಮ್ಮೊಂದಿಗೆ ಇದ್ದಾರೆ ಎಂಬ ಅಫಿಡವಿಟ್ ನಮ್ಮ ಬಳಿಯಿದೆ' ಎಂದು ಶಿಂಧೆ ಗುವಾಹಟಿಯಲ್ಲಿಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.