ADVERTISEMENT

ಮತದಾರರ ಗುರುತಿನ ಚೀಟಿ ಪಡೆದು ಹಣ ವಿತರಣೆ: ಅಂಬಾದಾಸ್‌ ದಾನ್ವೆ ಆರೋಪ

ಏಕನಾಥ ಶಿಂದೆ ನೇತೃತ್ವದ ಶಿವಸೇನೆ ವಿರುದ್ಧ ಅಂಬಾದಾಸ್‌ ದಾನ್ವೆ ಆರೋಪ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:10 IST
Last Updated 19 ನವೆಂಬರ್ 2024, 14:10 IST
...
...   

ಮುಂಬೈ: ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಕಾರ್ಯಕರ್ತರು ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಜನರಿಗೆ ಹಣ ನೀಡಿ ಅವರಿಂದ ಮತದಾರರ ಗುರುತಿನ ಚೀಟಿ ಪಡೆಯುತ್ತಿದ್ದಾರೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್‌ ದಾನ್ವೆ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಯ (ಯುಬಿಟಿ) ಹಿರಿಯ ನಾಯಕರಾದ ದಾನ್ವೆ ತಿಳಿಸಿದ್ದಾರೆ.

ಹಾಲಿ ಶಾಸಕ ಹಾಗೂ ಏಕನಾಥ ಶಿಂದೆ ಅವರ ಆಪ್ತ ಸಂಜಯ್‌ ಶಿರ್ಸಾಟ್ ವಿರುದ್ಧ ಶಿವಸೇನೆಯ (ಯುಬಿಟಿ) ರಾಜು ಶಿಂದೆ ಸ್ಪರ್ಧಿಸುತ್ತಿರುವ ಪಶ್ಚಿಮ ಔರಂಗಾಬಾದ್‌ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.   

ADVERTISEMENT

‘ಬೆರಳುಗಳಿಗೆ ಶಾಯಿ ಹಾಕಿ, ಮತದಾರರ ಗುರುತಿನ ಚೀಟಿ ಪಡೆದು ಹಣ ಹಂಚುತ್ತಿರುವುದು ಬೆಳಕಿದೆ ಬಂದಿದೆ. ಪೊಲೀಸರು ಸುಮಾರು ₹18 ಲಕ್ಷ ಸಂಗ್ರಹಿಸಿದ್ದಾರೆ. ಶಿರ್ಸಾಟ್‌ ಅವರ ಆದೇಶದಂತೆ ₹2 ಕೋಟಿ ಬಿಡುಗಡೆ ಮಾಡಲಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಚುನಾವಣಾ ಆಯೋಗವು ಈ ಕ್ಷೇತ್ರದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಬಯಸದಂತಿದೆ. ಚುನಾವಣಾ ಅಧಿಕಾರಿಗಳು ಇದ್ದರೂ ಶಾಯಿ ಹೊರಕ್ಕೆ ಬಂದದ್ದು ಹೇಗೆ ಎಂಬುದು ಪ್ರಶ್ನೆ’ ಎಂದು ದಾನ್ವೆ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ ನೀಡಿ ₹1,000 ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.