ADVERTISEMENT

ಮಹಾರಾಷ್ಟ್ರ: ಪ್ರವಾಹಕ್ಕೆ ಸಿಲುಕಿದ 45 ಜನರು

ಪಿಟಿಐ
Published 22 ಜುಲೈ 2023, 12:55 IST
Last Updated 22 ಜುಲೈ 2023, 12:55 IST
ಮುಂಬೈ ಮಹಾನಗರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ರಸ್ತೆಗಳೆಲ್ಲವೂ ಹೊಳೆಯಂತಾಗಿದ್ದು, ಶುಕ್ರವಾರ ರಸ್ತೆಯಲ್ಲಿ ಸಂಚರಿಸಲು ಮೋಟರ್‌ ಬೈಕ್‌ ಸವಾರರು ಪರದಾಡಿದರು– ಎಎಫ್‌ಪಿ ಚಿತ್ರ  
ಮುಂಬೈ ಮಹಾನಗರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ರಸ್ತೆಗಳೆಲ್ಲವೂ ಹೊಳೆಯಂತಾಗಿದ್ದು, ಶುಕ್ರವಾರ ರಸ್ತೆಯಲ್ಲಿ ಸಂಚರಿಸಲು ಮೋಟರ್‌ ಬೈಕ್‌ ಸವಾರರು ಪರದಾಡಿದರು– ಎಎಫ್‌ಪಿ ಚಿತ್ರ     

ಯವತ್ಮಾಳ್‌: ಯವತ್ಮಾಳ್‌ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಜಿಲ್ಲೆಯ ಮಹಾಗಾಂವ್‌ ತಾಲ್ಲೂಕಿನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 110 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. 

ಮಹಾಗಾಂವ್ ತಾಲೂಕಿನ ಆನಂದನಗರ ತಾಂಡಾ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ನಿವಾಸಿಗಳ ರಕ್ಷಣೆಗೆ ವಾಯುಪಡೆಯ ಎಂಐ–17 ವಿ5  ಹೆಲಿಕಾಪ್ಟರ್‌ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್‌) ತಂಡವನ್ನು ಕಳುಹಿಸಲಾಗಿತ್ತು. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಅಮೋಲ್‌ ಯೆಡ್ಗೆ ತಿಳಿಸಿದ್ದಾರೆ.

ಯವತ್ಮಾಳ್‌ ಜಿಲ್ಲೆಯ ಹಲವು ಭಾಗಗಳಲ್ಲಿ ಶುಕ್ರವಾರದಿಂದ ಸುರಿಯುತ್ತಿರುವ ಭಾರಿ ಮಳೆ, ತಗ್ಗು ಪ್ರದೇಶಗಳಲ್ಲಿ ಮನೆಗಳನ್ನು ಜಲಾವೃತಗೊಳಿಸಿದೆ. ಜನರು ಎತ್ತರದಲ್ಲಿನ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಮಾಡಿದೆ. ಯವತ್ಮಾಳ್‌ ನಗರದಲ್ಲಿ ಶುಕ್ರವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಮಧ್ಯೆ ರಾತ್ರಿಯಿಂದ ಬೆಳಿಗ್ಗೆವರೆಗೆ 117.5 ಮಿ.ಮೀ ಮಳೆ ಸುರಿದಿದೆ. ನಗರದ ಕೆಲವು ಭಾಗಗಳಲ್ಲಿ ಮನೆಗಳು ಮತ್ತು ರಸ್ತೆಗಳು ಜಲಾವೃತವಾಗಿವೆೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪೂರ್ವದ ಇನ್ನೊಂದು ಜಿಲ್ಲೆ ಬುಲ್‌ಧಾಣಾದ ಸಂಗ್ರಾಮ್‌ಪುರ ತಾಲ್ಲೂಕಿನ ಕಸೆ‌ರ್‌ಗಾವ್‌ ಗ್ರಾಮದಲ್ಲಿ ಸುಮಾರು 140 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

‌ಇದಕ್ಕೂ ಮೊದಲು ಉಪಮುಖ್ಯಮಂತ್ರಿ ದೇವೇಂದ್ರ ಪಢಣವೀಸ್‌ ಅವರು ಪ್ರವಾಹದಲ್ಲಿ ಸಿಲುಕಿರುವ ಗ್ರಾಮಸ್ಥರ ರಕ್ಷಣೆಗೆ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ಸ್ಥಳ ತಲುಪಲಿವೆ ಮತ್ತು ಮಹಾಗಾಂವ್ ತಾಲೂಕಿನಲ್ಲಿ 24 ತಾಸುಗಳಲ್ಲಿ 231 ಮಿ.ಮೀ. ಮಳೆ ದಾಖಲಾಗಿದೆ ಟ್ವಿಟ್‌ ಮಾಡಿದ್ದರು. ಆದರೆ, ವಾಯುಪಡೆ ಅಧಿಕಾರಿಯೊಬ್ಬರು, ರಕ್ಷಣಾ ಕಾರ್ಯಾಚರಣೆಗೆ ಒಂದೇ ಹೆಲಿಕಾಪ್ಟರ್‌ ಆಗಮಿಸುತ್ತಿರುವುದನ್ನು ದೃಢಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.