ADVERTISEMENT

ಪ್ರಾದೇಶಿಕವಾಗಿ ವಿಭಜನೆಯಾಗಿರುವ ಮಹಾಘಟಬಂಧನ್, ಭ್ರಷ್ಟಾಚಾರದ ಮೂಲಕ ಒಗ್ಗಟ್ಟಾಗಿದೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 9:18 IST
Last Updated 4 ಫೆಬ್ರುವರಿ 2019, 9:18 IST
ಪ್ರಕಾಶ್  ಜಾವಡೇಕರ್
ಪ್ರಕಾಶ್ ಜಾವಡೇಕರ್   

ನವದೆಹಲಿ: ವಿಪಕ್ಷಗಳು ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿವೆ. ಇವರೆಲ್ಲರೂ ಯಾರು?. ಇವರು ಜಾಮೀನು ಪಡೆದು ಹೊರಗೆ ಬಂದವರು.ಇಂಥವರೆಲ್ಲಾ ಜತೆಯಾಗಿ ನಿಲ್ಲುತ್ತಿದ್ದಾರೆ. ಇದು ಮಹಾಘಟಬಂಧನ ಅಲ್ಲ.ಇವರೆಲ್ಲರೂ ಪ್ರಾದೇಶಿಕವಾಗಿ ವಿಭಜನೆಗೊಂಡಿದ್ದರೂ ಭ್ರಷ್ಟಾಚಾರದಿಂದಾಗಿ ಒಗ್ಗಟ್ಟಾಗಿದ್ದಾರೆ. ಭ್ರಷ್ಟರೆಲ್ಲರೂ ಒಂದಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ತುರ್ತು ಪರಿಸ್ಥಿತಿ ಹೇರಿರುವುದು ಕೇಂದ್ರ ಅಲ್ಲ, ಮಮತಾ ಬ್ಯಾನರ್ಜಿ ಎಂದುಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಣೆಯಾದಂತಿದೆ.ವಿಪಕ್ಷಗಳ ನಾಯಕರು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಹೇಳುತ್ತಿದ್ದಾರೆ.ಅದೇ ಹೊತ್ತಿಗೆ ಕಾಂಗ್ರೆಸ್ ಅಧ್ಯಕ್ಷರಾಹುಲ್ ಗಾಂಧಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡುತ್ತಿದ್ದಾರೆ.ಇದರಲ್ಲಿ ಯಾವುದು ಸತ್ಯ ಎಂದು ಜಾವಡೇಕರ್ ಪ್ರಶ್ನಿಸಿದ್ದಾರೆ.

ADVERTISEMENT

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.