ADVERTISEMENT

ಮಹಾಘಟಬಂಧನ: ಬಿಹಾರದ 5 ವಿಧಾನ ಪರಿಷತ್ ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ?

ಐಎಎನ್ಎಸ್
Published 10 ಮಾರ್ಚ್ 2023, 10:19 IST
Last Updated 10 ಮಾರ್ಚ್ 2023, 10:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಬಿಹಾರ ವಿಧಾನ ಪರಿಷತ್‌ನ ಐದು ಸ್ಥಾನಗಳಿಗೆ ನಡೆಯುವ ಚುನಾವಣೆಗೆ 'ಮಹಾಘಟಬಂಧನ' ಮೈತ್ರಿಕೂಟವು ಇಂದು (ಶುಕ್ರವಾರ) ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.

ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ದಹಲಿಯಲ್ಲಿರುವ ತಮ್ಮ ತಂದೆ ಹಾಗೂ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್‌ ಅವರೊಂದಿಗೆ ಸಮಾಲೋಚನೆ ನಡೆಸಲು ದೆಹಲಿಗೆ ತೆರಳಿದ್ದಾರೆ.

ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಗಳಿಗೆ ಮಾರ್ಚ್‌ 31ರಂದು ಮತದಾನ ನಡೆಯಲಿದೆ. ಮಾರ್ಚ್‌ 13 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹಿಂಪಡೆಯಲು ಮಾರ್ಚ್‌ 16ರ ವರೆಗೆ ಸಮಯವಿದೆ. ಏಪ್ರಿಲ್‌ 5ರಂದು ಫಲಿತಾಂಶ ಪ್ರಕಟವಾಗಲಿದೆ.

ADVERTISEMENT

ಸದ್ಯ ಪರಿಷತ್‌ ಸದಸ್ಯರಾಗಿರುವ ಸರನ್‌ ಪದವೀಧರರ ಕ್ಷೇತ್ರದ ಅವದೇಶ್‌ ನಾರಾಯಣ್‌ ಸಿಂಗ್‌, ಗಯಾ ಪದವೀಧರರ ಕ್ಷೇತ್ರದ ವೀರೇಂದ್ರ ನಾರಾಯಣ್‌ ಯಾದವ್‌, ಗಯಾ ಶಿಕ್ಷಕರ ಕ್ಷೇತ್ರದ ಸಂಜೀವ್‌ ಶ್ಯಾಮ್‌ ಸಿಂಗ್‌, ಕೋಸಿ ಶಿಕ್ಷಕರ ಕ್ಷೇತ್ರದ ಸಂಜೀವ್‌ ಕುಮಾರ್‌ ಸಿಂಗ್‌ ಅವರ ಅವಧಿ ಇದೇ ವರ್ಷ ಮೇ 8ರಂದು ಕೊನೆಯಾಗಲಿದೆ. ಕೇದಾರ್ ನಾಥ್‌ ಪಾಂಡೆ ನಿಧನದ ಬಳಿಕ ಸರನ್‌ ಶಿಕ್ಷಕರ ಕ್ಷೇತ್ರದ ಸ್ಥಾನ ತೆರವಾಗಿದೆ.

ಈ ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.