ADVERTISEMENT

ಬೀದಿನಾಯಿಗಳ ದಾಳಿ: ಮೃಗಾಲಯದಲ್ಲಿ ನಾಲ್ಕು ಕೃಷ್ಣಮೃಗಗಳ ಸಾವು

ಪುಣೆಯ ರಾಜೀವ್‌ಗಾಂಧಿ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದ ಘಟನೆ

ಪಿಟಿಐ
Published 7 ಜನವರಿ 2021, 7:06 IST
Last Updated 7 ಜನವರಿ 2021, 7:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಇಲ್ಲಿನ ರಾಜೀವ್‌ ಗಾಂಧಿ ಮೃಗಾಲಯದಲ್ಲಿ ಗುರುವಾರ ಬೀದಿ ನಾಯಿಗಳ ದಾಳಿಯಿಂದ ಅಘಾತಗೊಂಡ ನಾಲ್ಕು ಕೃಷ್ಣಮೃಗಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಂದು ಕೃಷ್ಣಮೃಗ ತೀವ್ರವಾಗಿ ಗಾಯಗೊಂಡಿದೆ.

ಪುಣೆಯ ಕತ್ರಾಜ್‌ನಲ್ಲಿರುವ ಮೃಗಾಲಯದಲ್ಲಿಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಮೃಗಾಲಯದ ನಿರ್ದೇಶಕ ರಾಜ್‌ಕುಮಾರ್ ಜಾಧವ್ ತಿಳಿಸಿದ್ದಾರೆ.

ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1ರ ಅಡಿಯಲ್ಲಿ ಕೃಷ್ಣಮೃಗಗಳು ಸಂರಕ್ಷಿತ ಪ್ರಾಣಿಗಳಾಗಿವೆ. ಕೆಲವು ಬೀದಿ ನಾಯಿಗಳು ಕಣ್ತಪ್ಪಿಸಿ ಮೃಗಾಲಯಕ್ಕೆ ನುಸುಳಿ ಬಂದು, ಕೃಷ್ಣಮೃಗಗಳಿರುವ ಆವರಣದೊಳಗೆ ಸಿಲುಕಿಕೊಂಡವು. ಈ ನಾಯಿಗಳ ದಾಳಿಯಿಂದ ಅಘಾತಗೊಂಡ ನಾಲ್ಕು ಕೃಷ್ಣಮೃಗಗಳು (ಎರಡು ಗಂಡು, ಎರಡು ಹೆಣ್ಣು) ಸ್ಥಳದಲ್ಲೇ ಮೃತಪಟ್ಟವು‘ಎಂದು ಅವರು ವಿವರಿಸಿದರು. ಒಂದು ನಾಯಿಯ ಕೋರೆಹಲ್ಲಿನಿಂದ ಕೃಷ್ಣಮೃಗವನ್ನು ಕಚ್ಚಿದ್ದರಿಂದ, ಅದಕ್ಕೆ ತೀವ್ರಗಾಯವಾಗಿದೆ‘ ಎಂದು ಅವರು ಹೇಳಿದರು.

ADVERTISEMENT

ಮೃಗಾಲಯದ ಒಂದು ಭಾಗದಲ್ಲಿ ಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಆ ಭಾಗದಿಂದ ನಾಯಿಗಳು ನುಸುಳಿ ಬಂದಿರಬಹುದು ಎಂದು ಜಾಧವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೃಗಾಲಯದಲ್ಲಿ ಒಟ್ಟು ಮೂವತ್ನಾಲ್ಕು ಕೃಷ್ಣಮೃಗಗಳಿದ್ದವು. ಈಗ ನಾಲ್ಕು ಸಾವನ್ನಪ್ಪಿದ್ದ ನಂತರ, ಮೂವತ್ತು ಉಳಿದಿವೆ. ಘಟನೆಯ ಬಗ್ಗೆ ವರದಿಯನ್ನು ಪುಣೆ ಮಹಾನಗರ ಪಾಲಿಕೆಗೆ ಕಳುಹಿಸುವುದಾಗಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.