ಮುಂಬೈ: ಕೊರೋನಾ ಹೊಡೆತದಿಂದ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮಕ್ಕೆ ಮಹಾರಾಷ್ಟ್ರ ಸರ್ಕಾರ ದೊಡ್ಡ ರಿಲೀಫ್ ಕೊಟ್ಟಿದೆ. ಅಬಕಾರಿ ಪರವಾನಗಿ ಶುಲ್ಕವನ್ನು ಭಾಗಶಃ ಮನ್ನಾ ಮಾಡುವುದಾಗಿ ಘೋಷಿಸಿದ್ದು, 2020ರ ಶೇ 15 ರಷ್ಟು ವಾರ್ಷಿಕ ಶುಲ್ಕ ಹೆಚ್ಚಳವನ್ನು ಹಿಂಪಡೆದಿದೆ.
ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪಶ್ಚಿಮ ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ, ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳ ಸಂಘವು ಸ್ವಾಗತಿಸಿದೆ. ಕೋವಿಡ್ 19 ಹೊಡೆತದಿಂದಾಗಿ ಜಾರಿಗೆ ಬಂದ ಲಾಕ್ ಡೌನ್‌ನಿಂದಾಗಿ ಹೋಟೆಲ್ ಉದ್ಯಮವು ಭಾರೀ ನಷ್ಟ ಅನುಭವಿಸಿದೆ. ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲಿ ಬ್ರಿಟನ್ನಿನಿಂದ ಹರಡುತ್ತಿರುವ ಹೊಸ ಬಗೆಯ ಕೊರೋನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಗರ ವಲಯದಲ್ಲಿ ಡಿಸೆಂಬರ್ 22ರಿಂದ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಹಾಗಾಗಿ, ಕ್ರಿಸ್‌ಮಸ್ ಮತ್ತು ಹೊಸವರ್ಷಾಚರಣೆ ಸಂದರ್ಭದಲ್ಲೂ ಹೋಟೆಲ್ ಉದ್ಯಮದ ನಷ್ಟದತ್ತ ಸಾಗಿದೆ. ಸರ್ಕಾರದ ಈ ನಿರ್ಧಾರವು ಹೋಟೆಲ್ ಉದ್ಯಮಕ್ಕೆ ತುಂಬಾ ಸಹಕಾರಿಯಾಗಲಿದೆ.
`ಇದು ರಾಜ್ಯದ ರೆಸ್ಟೋರೆಂಟ್‌ಗಳಿಗೆ ದೊಡ್ಡ ಪರಿಹಾರವಾಗಿದೆ. ಅಬಕಾರಿ ಪರವಾನಗಿ ಶುಲ್ಕ ಮನ್ನಾ ಮಾಡಿದ ಸರ್ಕಾರಕ್ಕೆ ಧನ್ಯವಾದಗಳು. ಕಳೆದ 8 ತಿಂಗಳಿಂದ ಲಾಕ್ ಡೌನ್‌ನಿಂದಾಗಿ ಆತಿಥ್ಯ ಉದ್ಯಮವನ್ನೇ ಬಲಿ ಪಡೆದಿದೆ. ಇಡೀ ವರ್ಷ ಹೋಟೆಲ್‌ಗಳು ತೆರೆದಿದ್ದರೆ ವಾರ್ಷಿಕ ಶುಲ್ಕವನ್ನು ಪಾವತಿಸಬೇಕು. ಲಾಕ್‌ಡೌನ್ ಸಮಯದಲ್ಲಿ ರೆಸ್ಟೋರೆಂಟ್‌ಗಳು ಮುಚ್ಚಿದ್ದ ಸಮಯದಲ್ಲೂ ಶುಲ್ಕ ಪಾವತಿ ಬಗ್ಗೆ ನಮ್ಮ ಆಕ್ಷೇಪವಿತ್ತು. ಅಲ್ಲದೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಸ್ಥಗಿತಗೊಂಡಿದ್ದ ಸಮಯದಲ್ಲೂ ಶೇ 15 ರಷ್ಟುವಾರ್ಷಿಕ ಶುಲ್ಕ ಶೇ 15 ರಷ್ಟು ಹೆಚ್ಚಳವು ಅನ್ಯಾಯವಾಗಿತ್ತು ಎಂದು ಪಶ್ಚಿಮ ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಶ್ರೀ ಶೆರ್ರಿ ಭಾಟಿಯಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.