ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 21 ಮಹಿಳೆಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:22 IST
Last Updated 24 ನವೆಂಬರ್ 2024, 16:22 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಮುಂಬೈ: ಮಹಾರಾಷ್ಟ್ರದ ಒಟ್ಟು 288 ಸದಸ್ಯ ಬಲದ ವಿಧಾನಸಭೆಗೆ ಈ ಬಾರಿಯ ಚುನಾವಣೆಯಲ್ಲಿ ಒಟ್ಟು 21 ಮಹಿಳೆಯರು ಆಯ್ಕೆಯಾಗಿದ್ದಾರೆ.

ADVERTISEMENT

ಮಹಿಳಾ ಕೇಂದ್ರೀತ ಭರವಸೆಗಳೇ ಈ ಚುನಾವಣೆಯಲ್ಲಿ ಪ್ರಮುಖವಾಗಿ ಗಮನಸೆಳೆದಿದ್ದವು. ಎರಡೂ ಮೈತ್ರಿಕೂಟಗಳು ಮಹಿಳೆಯರನ್ನೇ ಗಮನದಲ್ಲಿ ಇರಿಸಿಕೊಂಡು ಭರವಸೆ ನೀಡಿದ್ದವು. 

ಮಹಾಯುತಿ ಮೈತ್ರಿ ಸರ್ಕಾರ, ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ನೀಡುವ ನೆರವನ್ನು ಈಗಿನ ₹ 1,500 ರಿಂದ ₹ 2,100ಕ್ಕೆ ಏರಿಸುವ ಭರವಸೆ ನೀಡಿತ್ತು. ಮಹಾವಿಕಾಸ ಅಘಾಡಿ ಮೈತ್ರಿಕೂಟವು ‘ಮಹಾಲಕ್ಷ್ಮಿ’ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹ 3000 ನೀಡುವುದಾಗಿ ಭರವಸೆ ನೀಡಿತ್ತು.

ಈ ಚುನಾವಣೆಯಲ್ಲಿ 363 ಮಹಿಳೆಯರು ಸೇರಿ 4,136 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ 21 ಮಹಿಳೆಯರು ಆಯ್ಕೆಯಾಗಿದ್ದಾರೆ. ಒಟ್ಟು ಸದಸ್ಯ ಬಲಕ್ಕೆ ಹೋಲಿಸಿದರೆ ಇವರ ಪ್ರಮಾಣ ಶೇ 7.29.

ಆಯ್ಕೆಯಾದ ಮಹಿಳೆಯರ ಪೈಕಿ 20 ಮಂದಿ ಮಹಾಯುತಿ ಮೈತ್ರಿ ಕೂಟಕ್ಕೆ ಸೇರಿದ್ದರೆ, ಮಹಾವಿಕಾಸ ಅಘಾಡಿಯಿಂದ ಒಬ್ಬ ಮಹಿಳೆಯಷ್ಟೇ ಆಯ್ಕೆಯಾಗಿದ್ದಾರೆ. ಈಗ ಅವಧಿ ಪೂರೈಸುತ್ತಿರುವ ವಿಧಾನಸಭೆಯಲ್ಲಿಒಟ್ಟು 24 ಶಾಸಕಿಯರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.