ADVERTISEMENT

Maharashtra Election | ರೈತರಿಗೆ ನೆರವು: ರಾಹುಲ್ ಗಾಂಧಿ ಭರವಸೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:04 IST
Last Updated 15 ನವೆಂಬರ್ 2024, 14:04 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

– ಪಿಟಿಐ ಚಿತ್ರ

ಮುಂಬೈ: ಸೋಯಾಬೀನ್, ಹತ್ತಿ ಮತ್ತು ಈರುಳ್ಳಿ ಬೆಳೆಯುವ ರೈತರ ಸಮಸ್ಯೆಗಳನ್ನು ಮಹಾ ವಿಕಾಸ್ ಆಘಾಡಿ (ಎಂವಿಎ) ಮೈತ್ರಿಕೂಟವು ಬಗೆಹರಿಸಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.

ADVERTISEMENT

‘ಎಂವಿಎಯು ಅಧಿಕಾರಕ್ಕೆ ಬಂದರೆ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಸೋಯಾಬೀನ್‌ಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಬೋನಸ್‌ ಸೇರಿದಂತೆ ಪ್ರತಿ ಕ್ವಿಂಟಲ್‌ಗೆ ₹7,000 ನೀಡಲಿದೆ. ಈರುಳ್ಳಿಗೆ ನ್ಯಾಯಯುತ ಬೆಲೆ ನಿಗದಿಗೆ ಸಮಿತಿ ರಚಿಸಲಿದೆ ಮತ್ತು ಹತ್ತಿಗೂ ಸೂಕ್ತ ಎಂಎಸ್‌ಪಿ ನಿಗದಿಮಾಡಲಿದೆ’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ಪ್ರತಿ ಕ್ವಿಂಟಲ್‌ ಸೋಯಾಬೀನ್‌ಗೆ ₹ 6,000 ಎಂಎಸ್‌ಪಿ ನಿಗದಿ ಮಾಡುವ ಭರವಸೆಯನ್ನು ಬಿಜೆಪಿಯು ಕಳೆದ ಮೂರು ಚುನಾವಣೆಗಳಿಂದ ನೀಡುತ್ತಾ ಬಂದಿದೆ. ಆದರೆ ರೈತರು ಕಷ್ಟಪಟ್ಟು ಬೆಳೆದ ಸೋಯಾಬೀನ್‌ಅನ್ನು ಕ್ವಿಂಟಲ್‌ಗೆ ₹3,000– ₹ 4,000ಕ್ಕೆ ಮಾರಾಟ ಮಾಡುವ ಅನಿವಾರ್ಯಕ್ಕೆ ಸಿಲುಕಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.