ಮುಂಬೈ: ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವು ರಾಜ್ಯಸಭೆ ಸದಸ್ಯ ಮಿಲಿಂದ್ ದಿಯೋರಾ ಅವರನ್ನು ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಹಾಗೂ ಶಿವಸೇನಾ–ಯುಬಿಟಿ ಅಭ್ಯರ್ಥಿ ಆದಿತ್ಯ ಠಾಕ್ರೆ ವಿರುದ್ಧ ಕಣಕ್ಕಿಳಿಸಲು ಸಜ್ಜಾಗಿದೆ.
ಆದಿತ್ಯ ಅವರು ಸ್ಪರ್ಧಿಸುವ ಮುಂಬೈನ ವರ್ಲಿಯಿಂದ ಮಿಲಿಂದ್ ಅವರನ್ನು ನಿಲ್ಲಿಸುವ ಶಿಂದೆ ಅವರ ನಿರ್ಧಾರವು, ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಎಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಮಾಜಿ ಸಚಿವರೂ ಆದ ಮಿಲಿಂದ್ ಅವರು ಈ ವರ್ಷ ನಡೆದ ಲೋಕಸಭೆ ಚುನಾವಣೆಗೂ ಮುನ್ನ ಶಿಂದೆ ಅವರ ಶಿವಸೇನಾಗೆ ಸೇರಿದ್ದರು. ಬಳಿಕ, ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.