ಮುಂಬೈ: ಮಹಾರಾಷ್ಟ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಲೋಕಸಭಾ ಸದಸ್ಯ ಕಿರಿಟ್ ಸೋಮಯ್ಯ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಸ್ಥಳೀಯ ಮಾರಾಠಿ ನ್ಯೂಸ್ ಚಾನಲ್‌ಗಳಲ್ಲಿ ಪ್ರಸಾರವಾಗಿವೆ.
ಈ ವಿಷಯ ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಕಿರಿಟ್ ಸೋಮಯ್ಯ ಅವರ ಬಗ್ಗೆ ಟೀಕೆಗಳು ಕೇಳಿ ಬಂದಿವೆ. ದೂರುಗಳು ಕೂಡ ದಾಖಲಾಗಿವೆ.
ಆದರೆ, ಕಿರಿಟ್ ಸೋಮಯ್ಯ ಅವರು, ಈ ವಿಡಿಯೊ ನನ್ನದಲ್ಲ. ನನ್ನ ಹೆಸರಿನಲ್ಲಿ ತಿರುಚಿದ ವಿಡಿಯೊಗಳನ್ನು ಬಿತ್ತರಿಸಲಾಗಿದೆ. ನಾನು ಯಾವುದೇ ಮಹಿಳೆ ಅಥವಾ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿಲ್ಲ. ವಿಡಿಯೊ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿ ಕ್ರಮ ಜರುಗಿಸಬೇಕು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ದೇವೇಂದ್ರ ಫಡಣವೀಸ್ ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ವಿಡಿಯೊದಲ್ಲಿ ಕಿರಿಟ್ ಸೋಮಯ್ಯ ಎನ್ನಲಾದ ವ್ಯಕ್ತಿ ಯಾರೋ ಮಹಿಳೆಯೊಬ್ಬರ ಜೊತೆ ಅಶ್ಲೀಲವಾಗಿ ಮಾತನಾಡುತ್ತಾ ಅಶ್ಲೀಲ ಹಾವಭಾವ ಪ್ರದರ್ಶಿಸುತ್ತಾ, ಬೆತ್ತಲೆ ದೇಹ ಪ್ರದರ್ಶನ ಮಾಡಿರುವುದು ತೋರುತ್ತದೆ.
ಒಂದು ಬಾರಿ ಶಾಸಕ ಹಾಗೂ ಎರಡು ಸಾರಿ ಬಿಜೆಪಿಯಿಂದ ಲೋಕಸಭೆ ಸದಸ್ಯರಾಗಿದ್ದ ಕಿರಿಟ್ ಸೋಮಯ್ಯ ಅವರು ಮುಂಬೈ ಉತ್ತರ ಭಾಗದ ರಾಜಕಾರಣಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.