ADVERTISEMENT

ಮಹಾರಾಷ್ಟ್ರ: ಮುಖ್ಯಮಂತ್ರಿ ಮಜಾ ಲಡ್ಕಾ ಭಾವು ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:34 IST
Last Updated 17 ಜುಲೈ 2024, 15:34 IST
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ   

ಮುಂಬೈ: ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾ ಯುತಿ (ಎನ್‌ಡಿಎ) ಸರ್ಕಾರವು ‘ಮಂತ್ರಿ ಯುವ ಕಾರ್ಯ-ಪ್ರಶಿಕ್ಷಣ ಯೋಜನೆ’ಯನ್ನು ಜಾರಿಗೆ ತಂದ ಬೆನ್ನಲ್ಲೇ ‘ಮುಖ್ಯಮಂತ್ರಿ ಮಜಾ ಲಡ್ಕಾ ಭಾವು ಯೋಜನೆ’ ಯನ್ನು ಜಾರಿಗೆ ತಂದಿದೆ.

ಸೋಲಾಪುರ ಜಿಲ್ಲೆಯ ಪಂಢರಪುರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಆಷಾಢ ಏಕಾದಶಿಯ ಸಂದರ್ಭದಲ್ಲಿ ಈ ಘೋಷಣೆ ಮಾಡಿದರು. 

ಈ ಯೋಜನೆಯು ಅಗತ್ಯ ಕೌಶಲಗಳೊಂದಿಗೆ ಯುವಕರಿಗೆ ತರಬೇತಿ ನೀಡಲು ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ನೆಲೆಸಿರುವ 18ರಿಂದ 35 ವರ್ಷದೊಳಗಿನ ಯುವಕರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದಕ್ಕಾಗಿ ಕನಿಷ್ಠ 12ನೇ ತರಗತಿ ಪಾಸಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.