ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ‘ಮಹಾ ವಿಕಾಸ್ ಆಘಾಡಿ’ (ಎಂವಿಎ) ಒಟ್ಟಾಗಿ ಇರುವ ಸಾಧ್ಯತೆಗಳು ಕ್ಷೀಣಿಸಿವೆ.
ವಿರೋಧ ಪಕ್ಷದ ಹಲವು ಶಾಸಕರು ಈಗಾಗಲೇ ಬಿಜೆಪಿ ನೇತೃತ್ವದ ‘ಮಹಾಯುತಿ’ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂವಿಎ ಒಕ್ಕೂಟದಿಂದ 50 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ- 20, ಕಾಂಗ್ರೆಸ್- 16 ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ 10 ಮಂದಿ ಗೆದ್ದಿದ್ದಾರೆ. ಉಳಿದಿಂತೆ ಸಮಾಜವಾದಿ ಪಕ್ಷ 2, ಕಮ್ಯೂನಿಷ್ಟ್ ಪಕ್ಷ (ಮಾರ್ಕಿಸ್ಟ್) 1 ಹಾಗೂ ಪೆಸೆಂಟ್ಸ್ ಆ್ಯಂಡ್ ವರ್ಕರ್ಸ್ ಪಕ್ಷದಿಂದ ಒಬ್ಬರು ಶಾಸಕರು ಗೆದ್ದಿದ್ದಾರೆ.
‘ಪವಾರ್ ನೇತೃತ್ವದ ಎನ್‌ಸಿಪಿಯ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಕೆಲವು ಕಾಂಗ್ರೆಸ್, ಶಿವಸೇನಾ (ಯುಬಿಟಿ) ಶಾಸಕರು ಕೂಡ ನಮ್ಮನ್ನು ಸಂಪರ್ಕಿಸಿದ್ದಾರೆ’ ಎಂದು ಎನ್‌ಸಿಪಿಯ ಅಧ್ಯಕ್ಷ ಅಜಿತ್ ಪವಾರ್ ಅವರ ಆಪ್ತ ಅನಿಲ್ ಪಾಟೀಲ್ ತಿಳಿಸಿದರು.
ಎನ್‌ಸಿಪಿಯ ಮುಖ್ಯ ಸಚೇತಕರಾಗಿ ಪಾಟೀಲ್ ಅವರನ್ನು ಆಯ್ಕೆ ಮಾಡಿದ ಕೆಲವು ಗಂಟೆಗಳ ಅಂತರದಲ್ಲಿಯೇ ಈ ಹೇಳಿಕೆ ನೀಡಿದ್ದಾರೆ.
‘ಮುಂದಿನ ನಾಲ್ಕು ತಿಂಗಳಲ್ಲಿ ನೀವು ಫಲಿತಾಂಶ ಕಾಣಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.