ಮುಂಬೈ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಹೊರಬೀಳುತ್ತಿರುವಂತೆಯೇ, ಪ್ರತಿಪಕ್ಷಗಳು ಫಲಿತಾಂಶದ ಬಗ್ಗೆ ಸಂಶಯ ವ್ಯಕ್ತಪಡಿಸಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. 288 ಸದಸ್ಯಬಲದ ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಇತಿಹಾಸದಲ್ಲಿ, ಕಳೆದ 34 ವರ್ಷಗಳಲ್ಲಿ ಯಾವೊಂದು ಪಕ್ಷವೂ ಇದುವರೆಗೆ ಏಕಾಂಗಿಯಾಗಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ (145) ಪಡೆದದ್ದಿಲ್ಲ. ಬಿಜೆಪಿ ಮಾತ್ರವೇ 2014 ಹಾಗೂ 2019ರಲ್ಲಿ ಗರಿಷ್ಠ 100ರ ಸಂಖ್ಯೆ ದಾಟಿತ್ತಷ್ಟೆ.
ವರ್ಷ | ಕಾಂಗ್ರೆಸ್ | ಎನ್‌ಸಿಪಿ | ಬಿಜೆಪಿ | ಶಿವಸೇನಾ |
---|---|---|---|---|
1990 | 141 | — | 42 | 52 |
1995 | 80 | — | 65 | 73 |
1999 | 75 | 58 | 56 | 69 |
2004 | 69 | 71 | 54 | 62 |
2009 | 82 | 62 | 46 | 44 |
2014 | 42 | 41 | 122 | 63 |
2019 | 44 | 54 | 105 | 56 |
2024ರ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನ ವಿಭಿನ್ನ ಪಕ್ಷಗಳ ಬಲಾಬಲ ಹೀಗಿತ್ತು.
ಬಿಜೆಪಿ - 103
ಶಿವಸೇನೆ (ಏಕನಾಥ ಶಿಂದೆ) - 38
ಎನ್‌ಸಿಪಿ (ಅಜಿತ್ ಪವಾರ್) - 42
ಕಾಂಗ್ರೆಸ್ - 37
ಶಿವಸೇನೆ (ಉದ್ಧವ್ ಠಾಕ್ರೆ) - 15
ಎನ್‌ಸಿಪಿ (ಶರದ್ ಪವಾರ್) - 10
288 ಸದಸ್ಯಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ಸಂಖ್ಯೆ 145
ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ರಚನೆಯಾಗಿದ್ದು 1999ರಲ್ಲಿ.
ಶಿವಸೇನೆಯು ಒಡೆದು ಹೋಳಾಗಿದ್ದು 2022ರ ಜೂನ್-ಜುಲೈ ತಿಂಗಳಲ್ಲಿ
ಎನ್‌ಸಿಪಿ ಒಡೆದು ಹೋಳಾಗಿದ್ದು 2023ರ ಜೂನ್-ಜುಲೈ ತಿಂಗಳಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.