ADVERTISEMENT

Maharashtra | ವಿಡಿಯೊ: ಫೋಟೊಗೆ ಪೋಸ್ ಕೊಡಲು ಬಂದ ವ್ಯಕ್ತಿಯನ್ನು ಒದ್ದ BJP ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2024, 11:30 IST
Last Updated 12 ನವೆಂಬರ್ 2024, 11:30 IST
<div class="paragraphs"><p>ಮಹಾರಾಷ್ಟ್ರದ ಬಿಜೆಪಿ ನಾಯಕ ರಾವ್‌ಸಾಹೇಬ್‌ ದಾನ್ವೆ ಅವರು  ವ್ಯಕ್ತಿಯೊಬ್ಬರನ್ನು ಕಾಲಿನಿಂದ ಒದ್ದಿರುವ ದೃಶ್ಯ</p></div>

ಮಹಾರಾಷ್ಟ್ರದ ಬಿಜೆಪಿ ನಾಯಕ ರಾವ್‌ಸಾಹೇಬ್‌ ದಾನ್ವೆ ಅವರು ವ್ಯಕ್ತಿಯೊಬ್ಬರನ್ನು ಕಾಲಿನಿಂದ ಒದ್ದಿರುವ ದೃಶ್ಯ

   

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ರಾವ್‌ಸಾಹೇಬ್‌ ದಾನ್ವೆ ಅವರು ತಮ್ಮೊಂದಿಗೆ ಫೋಟೊಗೆ ಪೋಸ್‌ ಕೊಡಲು ಬಂದ ವ್ಯಕ್ತಿಯೊಬ್ಬರನ್ನು ಕಾಲಿನಿಂದ ಒದ್ದಿರುವುದು ವಿವಾದಕ್ಕೆ ಕಾರಣವಾಗಿದೆ.

ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾವ್‌ಸಾಹೇಬ್‌ ದಾನ್ವೆ ರಾಜ್ಯದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಜಲ್ನಾ ಜಿಲ್ಲೆಯ ಭೋಕರ್ದನ್‌ನಲ್ಲಿ ಸೋಮವಾರ ದಾನ್ವೆ ಅವರು ಶಿವಸೇನಾ ನಾಯಕ, ಮಾಜಿ ಸಚಿವ ಅರ್ಜುನ್ ಖೋಟ್ಕರ್ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ದಾನ್ವೆ–ಅರ್ಜುನ್ ಅವರೊಂದಿಗೆ ಫೋಟೊಗೆ ಪೋಸ್‌ ಕೊಡಲು ಬರುತ್ತಿದ್ದರು. ಆಗ ಆತನನ್ನು ಕಾಲಿನಿಂದ ಒದ್ದಿರುವ ದಾನ್ವೆ, ಪಕ್ಕಕ್ಕೆ ಹೋಗುವಂತೆ ಸೂಚಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ರಾವ್‌ಸಾಹೇಬ್‌ ದಾನ್ವೆ ಅವರು ವ್ಯಕ್ತಿಯನ್ನು ಒದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ದಾನ್ವೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

‘ಸಂತ್ರಸ್ತ ವ್ಯಕ್ತಿಯನ್ನು ಶೇಖ್ ಎಂದು ಗುರುತಿಸಲಾಗಿದೆ. ಆತ ತಾನು ಮತ್ತು ದಾನ್ವೆ ಅವರು 30 ವರ್ಷಗಳಿಂದ ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ನಾನು ದಾನ್ವೆ ಅವರ ಅಂಗಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೆ ಅಷ್ಟೇ’ ಎಂದು ಹೇಳಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ‘ರಾವ್‌ಸಾಹೇಬ್ ಫುಟ್‌ಬಾಲ್‌ ತಂಡದಲ್ಲಿ ಇರಬೇಕಿತ್ತು. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಏನೂ ಸಿಕ್ಕಿಲ್ಲ. ಆದ್ದರಿಂದ ಅವರು ಮತ್ತೆ ಬಿಜೆಪಿಗೆ ಮತ ಹಾಕುವ ಮುನ್ನ ಒಮ್ಮೆ ಯೋಚಿಸುವುದು ಒಳಿತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.