ADVERTISEMENT

ಸುವರ್ಣ ಕರಂಜೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಂಜಯ್ ರಾವುತ್ ಸಹೋದರನ ವಿರುದ್ಧ FIR

ಪಿಟಿಐ
Published 5 ನವೆಂಬರ್ 2024, 5:47 IST
Last Updated 5 ನವೆಂಬರ್ 2024, 5:47 IST
<div class="paragraphs"><p>ಸುನಿಲ್ ರಾವುತ್</p></div>

ಸುನಿಲ್ ರಾವುತ್

   

Credit: X/@SunilRaut65

ಮುಂಬೈ: ಪ್ರತಿಸ್ಪರ್ಧಿ ಶಿವಸೇನಾ (ಏಕನಾಥ ಶಿಂದೆ ಬಣ) ನಾಯಕಿ ಸುವರ್ಣ ಕರಂಜೆ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರ ಸಹೋದರ, ಶಾಸಕ ಸುನಿಲ್ ರಾವುತ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ADVERTISEMENT

ಮುಂಬೈನ ವಿಕ್ರೋಲಿ ವಿಧಾನಸಭಾ ಕ್ಷೇತ್ರದಲ್ಲಿ ಸುನಿಲ್‌ ರಾವುತ್‌ ಮತ್ತು ಕರಂಜೆ ಪರಸ್ಪರ ಪೈಪೋಟಿ ಏರ್ಪಟ್ಟಿದೆ.

ಅಕ್ಟೋಬರ್ 27ರಂದು ವಿಕ್ರೋಲಿಯ ಟ್ಯಾಗೋರ್ ನಗರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕರಂಜೆ ವಿರುದ್ಧ ಸುನಿಲ್‌ ರಾವುತ್‌ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಕರಂಜೆ ನೀಡಿದ ದೂರಿನ ಮೇರೆಗೆ ಪೊಲೀಸರು ಸುನಿಲ್ ರಾವುತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.

ಈಚೆಗೆ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸಂಸದ ಅರವಿಂದ ಸಾವಂತ್‌ ಅವರು ಶಿವಸೇನಾದ (ಏಕನಾಥ ಶಿಂದೆ ಬಣ) ಅಭ್ಯರ್ಥಿ, ವಸ್ತ್ರ ವಿನ್ಯಾಸಕಿ ಶಾಯಿನಾ ಎನ್‌ಸಿ ಅವರನ್ನು ‘ಹೊರಗಿನ ಮಾಲು’ ಎಂದು ಕರೆದಿರುವುದು ಮಹಾ ರಾಷ್ಟ್ರದ ರಾಜಕೀಯದಲ್ಲಿ ವಿವಾದ ಹುಟ್ಟುಹಾಕಿತ್ತು. ಈ ಹೇಳಿಕೆಯಿಂದ ಉದ್ಧವ್‌ ಠಾಕ್ರೆಯವರ ಶಿವಸೇನಾ ಬಣ ತೀವ್ರ ಮುಜುಗರಕ್ಕೀಡಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.