ADVERTISEMENT

‘ಹಲೊ’ ಬದಲು ‘ವಂದೇ ಮಾತರಂ’ ಕಡ್ಡಾಯ: ಮಹಾರಾಷ್ಟ್ರ ಅರಣ್ಯ ಇಲಾಖೆ ಆದೇಶ

ಪಿಟಿಐ
Published 25 ಆಗಸ್ಟ್ 2022, 15:41 IST
Last Updated 25 ಆಗಸ್ಟ್ 2022, 15:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪುಣೆ: ಅಧಿಕೃತ ಕೆಲಸಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳಿಗೆ ಉತ್ತರಿಸುವ ಮೊದಲು ಹಲೊ ಬದಲು ‘ವಂದೇ ಮಾತರಂ’ ಎಂಬುದಾಗಿ ಹೇಳಬೇಕು ಎಂದುಮಹಾರಾಷ್ಟ್ರ ಸರ್ಕಾರದ ಅರಣ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಸಂಸ್ಕೃತಿ ಮತ್ತು ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಅವರು, ಕಚೇರಿಗಳಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸುವಾಗ ‘ಹಲೊ’ ಬದಲಿಗೆ ‘ವಂದೇ ಮಾತರಂ’ ಹೇಳುವಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಬೆನ್ನಲ್ಲೇಈ ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT