ADVERTISEMENT

ಹಿರಿಯ ನಾಗರಿಕರಿಗೆ ತೀರ್ಥಯಾತ್ರೆ ಯೋಜನೆ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಪಿಟಿಐ
Published 29 ಜೂನ್ 2024, 10:39 IST
Last Updated 29 ಜೂನ್ 2024, 10:39 IST
<div class="paragraphs"><p>ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ</p></div>

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ

   

ಮುಂಬೈ: ಎಲ್ಲ ಧರ್ಮದ ಹಿರಿಯ ನಾಗರಿಕರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರು ಶನಿವಾರ ‘ಮುಖ್ಯಮಂತ್ರಿ ತೀರ್ಥ ದರ್ಶನ್‌ ಯೋಜನೆ’ ಘೋಷಿಸಿದರು.

‘ಸ್ವಂತವಾಗಿ ಭೇಟಿ ನೀಡಲು ಸಾಧ್ಯವಾಗದ ಹಿರಿಯರಿಗೆ ಈ ಯೋಜನೆ ಅಡಿಯಲ್ಲಿ ನೆರವು ನೀಡಲಾಗುತ್ತದೆ’ ಎಂದರು.

ADVERTISEMENT

ರಾಜ್ಯ ವಿಧಾನಸಭೆಯಲ್ಲಿ ಶಿವಸೇನಾ ಶಾಸಕ ಪ್ರತಾಪ್‌ ಸರ್‌ನಾಯಕ್‌ ಅವರು ಗಮನಸೆಳೆಯುವ ಸೂಚನೆ ಮಂಡಿಸಿದ ವೇಳೆ ಅದಕ್ಕೆ ಉತ್ತರಿಸಿ ಶಿಂದೆ ಅವರು ಈ ಘೋಷಣೆ ಮಾಡಿದರು.

ಯೋಜನೆಗೆ ‘ಮುಖ್ಯಮಂತ್ರಿ ತೀರ್ಥ ದರ್ಶನ್‌ ಯೋಜನೆ’ ಎಂದು ಹೆಸರಿಡಲಾಗಿದ್ದು, ಎಲ್ಲ ಧರ್ಮದ ಹಿರಿಯ ನಾಗರಿಕರಿಗೆ ನೆರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರಚಿಸಿ, ತೀರ್ಥಕ್ಷೇತ್ರಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.