ADVERTISEMENT

ಬಾಗಲಕೋಟೆಯಲ್ಲಿ ಶಿವಾಜಿ ಪ್ರತಿಮೆ ತೆರವು: ಮಹಾರಾಷ್ಟ್ರ ಸರ್ಕಾರದಿಂದ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2023, 4:46 IST
Last Updated 19 ಆಗಸ್ಟ್ 2023, 4:46 IST
ಬಾಗಲಕೋಟೆಯ ಲಯನ್ಸ್ ಸರ್ಕಲ್‌ ಬಳಿ  ಕೂಡಿಸಿರುವ ಶಿವಾಜಿ ಮೂರ್ತಿ (ಸಂಗ್ರಹ ಚಿತ್ರ)
ಬಾಗಲಕೋಟೆಯ ಲಯನ್ಸ್ ಸರ್ಕಲ್‌ ಬಳಿ ಕೂಡಿಸಿರುವ ಶಿವಾಜಿ ಮೂರ್ತಿ (ಸಂಗ್ರಹ ಚಿತ್ರ)   

ಮುಂಬೈ: ಬಾಗಲಕೋಟೆ ನಗರದ ಲಯನ್ಸ್‌ ಸರ್ಕಲ್‌ ಬಳಿ ಪ್ರತಿಷ್ಠಾಪನೆ ಮಾಡಲಾಗಿದ್ದ ಛತ್ರಪತಿ ಶಿವಾಜಿ ಪ್ರತಿಮೆ ತೆರವುಗೊಳಿಸಿರುವುದಕ್ಕೆ ಮಹಾರಾಷ್ಟ್ರ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಶಿವಾಜಿ ಪ್ರತಿಮೆಯನ್ನು ಅನಧಿಕೃತವಾಗಿ ಪ್ರತಿಷ್ಠಾಪಿಸಲಾಗಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಮೂರ್ತಿಯನ್ನು ಬುಧವಾರ ರಾತ್ರಿ ತೆರವುಗೊಳಿಸಿತ್ತು. ಪ್ರತಿಮೆ ತೆರವು ನಿರ್ಧಾರದ ವಿರುದ್ಧ ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮೂರು ದಿನಗಳ ಕಾಲ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಹೊರಡಿಸಿತ್ತು.

ಶಿವಾಜಿ ಪ್ರತಿಮೆ ತೆರವುಗೊಳಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ‘ಎಕ್ಸ್‌’ನಲ್ಲಿ ಟ್ವೀಟ್‌ ಮಾಡಿರುವ ಮಹಾರಾಷ್ಟ್ರ ಸಚಿವ ಸುಧೀರ್ ಮುಂಗಂತಿವಾರ್, ಕರ್ನಾಟಕ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಓದಿ: ಬಾಗಲಕೋಟೆ: ಶಿವಾಜಿ ಮೂರ್ತಿ ತೆರವು- ವಾಗ್ವಾದ, ಪ್ರತಿಭಟನಾಕಾರರು ವಶಕ್ಕೆ

‘ದೇಶವು ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಅವರ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶಿವಾಜಿ ಮಹಾರಾಜರನ್ನು ದ್ವೇಷಿಸುವ ಕಾಂಗ್ರೆಸ್ ಸರ್ಕಾರಕ್ಕೆ, ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ನಗರವನ್ನು ಸ್ವತಃ ಷಹಾಜಿ ರಾಜೆ (ಶಿವಾಜಿ ಅವರ ತಂದೆ) ನಿರ್ಮಿಸಿದ ನಗರವೆಂದು ಗೊತ್ತಿಲ್ಲ’ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.