ADVERTISEMENT

ಫೋನ್‌ನಲ್ಲಿ ‘ಹಲೋ’ ಎನ್ನುವ ಬದಲು ‘ವಂದೇ ಮಾತರಂ’: ಮಹಾರಾಷ್ಟ್ರ ಸರ್ಕಾರದ ಅಭಿಯಾನ

ಪಿಟಿಐ
Published 2 ಅಕ್ಟೋಬರ್ 2022, 11:02 IST
Last Updated 2 ಅಕ್ಟೋಬರ್ 2022, 11:02 IST
ಸುಧೀರ್‌ ಮುಂಗಟಿವಾರ್‌
ಸುಧೀರ್‌ ಮುಂಗಟಿವಾರ್‌   

ಮುಂಬೈ:‘ದೂರವಾಣಿ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲು ‘ವಂದೇ ಮಾತರಂ’ ಎಂದು ಹೇಳುವಂತೆ ಜನರನ್ನು ಪ್ರೇರೇಪಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರವು ಭಾನುವಾರ ಅಭಿಯಾನವೊಂದನ್ನು ಆರಂಭಿಸಿದೆ.

‘ಇನ್ನು ಮುಂದೆ ‘ಹಲೋ’ ಬದಲು ‘ವಂದೇ ಮಾತರಂ’ ಎಂದೇ ಹೇಳಬೇಕೆಂದು ರಾಜ್ಯದ ನಾಗರಿಕರಲ್ಲಿ ನಾವು ಮನವಿ ಮಾಡಿಕೊಳ್ಳುತ್ತೇವೆ. ಈ ಸಂಬಂಧ ಅವರಲ್ಲಿ ಅರಿವು ಮೂಡಿಸಲು ಅಭಿಯಾನ ಕೈಗೊಂಡಿದ್ದೇವೆ’ ಎಂದು ಸಂಸ್ಕೃತಿ ಸಚಿವ ಸುಧೀರ್‌ ಮುಂಗಟಿವಾರ್‌ ಹೇಳಿದ್ದಾರೆ.

‘ದೂರವಾಣಿ ಕರೆಗಳನ್ನು ಸ್ವೀಕರಿಸುವಾಗ ‘ಜೈ ಭೀಮ್‌’, ‘ಜೈ ಶ್ರೀರಾಮ್‌’ ಅಥವಾ ಅವರ ಪೋಷಕರ ಹೆಸರನ್ನು ಹೇಳಿದರೂ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ‘ಹಲೋ’ ಎಂದು ಕರೆಯುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ.

ADVERTISEMENT

‘ರಾಜ್ಯದ ಸರ್ಕಾರಿ ನೌಕರರು ಕಚೇರಿ ಅಥವಾ ವೈಯಕ್ತಿಕ ಮೊಬೈಲ್‌ ಸಂಖ್ಯೆಗಳಿಗೆ ಬರುವ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲು ‘ವಂದೇ ಮಾತರಂ’ ಎಂದು ಹೇಳಬೇಕೆಂಬ ಸುತ್ತೋಲೆಯನ್ನು ಸರ್ಕಾರವು ಶನಿವಾರ ಹೊರಡಿಸಿತ್ತು. ‘ಹಲೋ’ ಎನ್ನುವುದು ಪಾಶ್ಚಿಮಾತ್ಯ ಸಂಸ್ಕೃತಿ. ಈ ಪದಕ್ಕೆ ಸೂಕ್ತ ಅರ್ಥವೇ ಇಲ್ಲ ಎಂದೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.