ನವದೆಹಲಿ: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭೆಯ ಚುನಾವಣೆ ಮತ ಎಣಿಕೆ ನಡೆಯಲಿದೆ. ಮಹಾರಾಷ್ಟ್ರಕ್ಕೆ ನವೆಂಬರ್ 20ರಂದು ಏಕಕಾಲಕ್ಕೆ ಚುನಾವಣೆ ನಡೆದಿತ್ತು. ಜಾರ್ಖಂಡ್ ರಾಜ್ಯದಲ್ಲಿ ನವೆಂಬರ್ 13 ಮತ್ತು 20ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು.
ಕೇರಳದ ವಯನಾಡ್ ಮತ್ತು ಮಹಾರಾಷ್ಟ್ರದ ನಾಂದೆಡ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡಿರುವುದರಿಂದ ಈ ಕ್ಷೇತ್ರ ಗಮನ ಸೆಳೆದಿದೆ.
ದೇಶದ 14 ರಾಜ್ಯಗಳಲ್ಲಿನ 48 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಸಹ ನಾಳೆ ನಡೆಯಲಿದೆ. ಕರ್ನಾಟಕದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳು ಇದರಲ್ಲಿ ಸೇರಿವೆ.
ಉತ್ತರಪ್ರದೇಶ 9, ರಾಜಸ್ಥಾನ 7, ಪಶ್ಚಿಮ ಬಂಗಾಳ 6, ಅಸ್ಸಾಂ 5, ಬಿಹಾರ 4, ಪಂಜಾಂಬ್ 4, ಕರ್ನಾಟಕ 3, ಕೇರಳ 2, ಮಧ್ಯಪ್ರದೇಶ 2, ಸಿಕ್ಕಿಂ 2 ಹಾಗೂ ಛತ್ತೀಸ್‌ಗಢ, ಗುಜರಾತ್, ಮೇಘಾಲಯ, ಉತ್ತರಾಖಂಡ್ ರಾಜ್ಯಗಳ ತಲಾ ಒಂದು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆಯ ಕುರಿತಂತೆ ಪ್ರಜಾವಾಣಿಯಲ್ಲಿ ಕ್ಷಣ ಕ್ಷಣದ ತಾಜಾ ಫಲಿತಾಂಶದ ಮಾಹಿತಿ ಪ್ರಕಟವಾಗಲಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.