ಮುಂಬೈ: 2019ರ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಮುಂಬೈ ಮತ್ತು ಕೊಲಬಾದಲ್ಲಿ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗೆಯೇ ಉಪನಗರಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಈ ಸಲ ಮತದಾನ ಪ್ರಮಾಣ ಕೊಂಚ ಕುಸಿದಿದೆ.
ಕೇಂದ್ರ ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, 2019ರ ಚುನಾವಣೆಯಲ್ಲಿ ಮುಂಬೈನಲ್ಲಿ ಶೇ 52.79ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ 54.52 ರಷ್ಟು ಮತದಾನವಾಗಿದೆ.
ದ್ವೀಪ ನಗರದಲ್ಲಿ 2019ರಲ್ಲಿ ಶೇ 48.40ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 52.65ರಷ್ಟು ಆಗಿದೆ. ಆದರೆ ಉಪನಗರ ಜಿಲ್ಲೆಯಲ್ಲಿ ಶೇ 57.19ರಿಂದ ಶೇ 56.39ಕ್ಕೆ ಕುಸಿದಿದೆ.
ದ್ವೀಪ ನಗರದ ಎರಡು ಕ್ಷೇತ್ರಗಳಾದ ಕೊಲಾಬಾ ಮತ್ತು ಮುಂಬರದೇವಿಯಲ್ಲಿ ಶೇ 50ರಷ್ಟು ಮತದಾನವಾಗಿಲ್ಲ. ಕೊಲಾಬಾದಲ್ಲಿ ಶೇ 44.44 ಮತ್ತು ಮುಂಬಾದೇವಿಯಲ್ಲಿ ಶೇ 48.76 ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಕೊಲಾಬಾದಲ್ಲಿ ಶೇ 40.13ರಷ್ಟು ಮತದಾನವಾಗಿತ್ತು.
ಅದೇ ರೀತಿ, ಮುಂಬೈನ ಉಪನಗರಗಳಲ್ಲಿನ 26 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳು ಶೇ 50ಕ್ಕಿಂತ ಕಡಿಮೆ ಮತದಾನ ದಾಖಲಿಸಿವೆ.
ದೇಶದ ಆರ್ಥಿಕ ರಾಜಧಾನಿಯು 36 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅದರಲ್ಲಿ 10 ದ್ವೀಪ ನಗರದಲ್ಲಿ ಮತ್ತು ಉಳಿದವು ಉಪನಗರ ಜಿಲ್ಲೆಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.