ಮುಂಬೈ: ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ, ಪ್ರಕಾಶ್ ಅಂಬೇಡ್ಕರ್ ಅವರ ಬಹುಜನ ಆಘಾಡಿ (ವಿಬಿಎ), ಬಹುಜನ ಸಮಾಜ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದು, ಆಡಳಿತಾರೂಢ ಮಹಾಯುತಿ ಭಾರೀ ಗೆಲುವು ಸಾಧಿಸಿದೆ.
288 ಸದಸ್ಯರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 235 ಸ್ಥಾನಗಳನ್ನು ಗೆದ್ದುಕೊಂಡಿದೆ. ‘ಮಹಾವಿಕಾಸ ಆಘಾಡಿ’ ಮೈತ್ರಿಕೂಟ ಕೇವಲ 49 ಸ್ಥಾನಗಳನ್ನು ಪಡೆದು ಹೀನಾಯವಾಗಿ ಸೋತಿದೆ.
ಸಮಾಜವಾದಿ ಪಕ್ಷ 2, ಜನ ಸ್ವರಾಜ್ಯ 2, ಸಿಪಿಐ(ಎಂ), ಎಐಎಂಐಎಂ, ರಾಷ್ಟ್ರೀಯ ಯುವ ಸ್ವಾಭಿಮಾನ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ರೈತ ಮತ್ತು ಕಾರ್ಮಿಕ ಪಕ್ಷ ಮತ್ತು ರಾಜಶ್ರೀ ಶಾಹು ಅಭಿವೃದ್ಧಿ ಆಘಾಡಿ ತಲಾ ಒಂದು ಸ್ಥಾನ ಪಡೆದಿವೆ.
ಬಹುಜನ ಸಮಾಜ ಪಕ್ಷ 237 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ ಒಂದೂ ಸ್ಥಾನವನ್ನು ಗೆಲ್ಲಲಾಗಿಲ್ಲ. ಎಂಎನ್‌ಎಸ್ 125, ವಿಬಿಎ 200 ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಎರಡೂ ಪಕ್ಷಗಳು ಖಾತೆ ತೆರೆಯುವಲ್ಲಿ ವಿಫಲವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.