ADVERTISEMENT

Maharashtra Elections: ಬಾರಾಮತಿಯಿಂದ ಅಜಿತ್‌ ಪವಾರ್ ಸ್ಪರ್ಧೆ

ಪಿಟಿಐ
Published 23 ಅಕ್ಟೋಬರ್ 2024, 15:28 IST
Last Updated 23 ಅಕ್ಟೋಬರ್ 2024, 15:28 IST
ಅಜಿತ್‌ ಪವಾರ್‌
ಅಜಿತ್‌ ಪವಾರ್‌   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ 38 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಬುಧವಾರ ಬಿಡುಗಡೆ ಮಾಡಿದೆ.

ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ಅವರು ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ 26 ಶಾಸಕರಿಗೆ ಪುನಃ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ದಿ.ಮಾಣಿಕ್‌ರಾವ್ ಗಾವಿತ್‌ ಅವರ ಪುತ್ರ ಭರತ್‌ ಗಾವಿತ್ ಅವರಿಗೆ ನವಪುರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ADVERTISEMENT

ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಎನ್‌ಸಿಪಿ ಸೇರಿದ್ದ  ಹಿರಾಮನ್‌ ಖೋಸ್ಕರ್‌ ಅವರನ್ನು ಇಗತ್‌ಪುರಿಯಿಂದ ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.