ಮುಂಬೈ: ಕಾಂಗ್ರೆಸ್ ನಾಯಕ 'ರಾಹುಲ್ ಗಾಂಧಿ ಮುಂಬೈಗೆ ದೊಡ್ಡ 'ತಿಜೋರಿ' ತಂದಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಆರೋಪಿಸಿದ್ದಾರೆ.
ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ಏನನ್ನೋ ಕೊಡಲು ತಿಜೋರಿ ತಂದಿದ್ದಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಅವರು ಮಹಾರಾಷ್ಟ್ರದ ತಿಜೋರಿಯನ್ನು ಲೂಟಿ ಮಾಡಲು ಬಂದಿದ್ದಾರೆ ಎಂದು ಹೇಳಿದ್ದಾರೆ.
‘ಧಾರಾವಿಯಲ್ಲಿ 2 ಲಕ್ಷ ಮಂದಿಗೆ ಮನೆ ಸಿಗಲಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಎಲ್ಲರೂ ಧಾರಾವಿಗೆ ಆದ್ಯತೆ ನೀಡಬೇಕು. ಇದು ಏಷ್ಯಾದ ಅತಿದೊಡ್ಡ ಯೋಜನೆಯಾಗಿದೆ. ರಾಜಕೀಯ ವ್ಯಕ್ತಿಗಳನ್ನು ಬದಿಗೆ ಇಟ್ಟು, ಅದರಿಂದ ಆಗುವ ಪ್ರಯೋಜನ ನೋಡಿ ಎಂದು ಧಾರಾವಿಯ ಜನರಲ್ಲಿ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
(ಎಎನ್‌ಐ ಸುದ್ದಿ ಸಂಸ್ಥೆಯ ವರದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.