ಮುಂಬೈ: ಶೀಘ್ರವೇ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಶಿವ ಸೇನಾದವರೇ ಮುಖ್ಯಮಂತ್ರಿಯಾಗಲಿದ್ದಾರೆ, ಶರದ್ ಪವಾರ್ ಅಲ್ಲ. ಮಹಾರಾಷ್ಟ್ರದ ಚೆಹರೆ ಮತ್ತು ರಾಜಕೀಯ ಬದಲಾಗಲಿದೆ.ಅದನ್ನು ನೀವು ನೋಡಬಹುದು. ನೀವು ಕೋಲಾಹಲ ಎಂದು ಹೇಳುತ್ತಿರುವುದು, ಕೋಲಾಹಲವಲ್ಲ,ಅದು ನ್ಯಾಯ ಮತ್ತು ಹಕ್ಕಿಗಾಗಿ ಇರುವ ಹೋರಾಟ. ಗೆಲುವು ನಮ್ಮದೇ ಎಂದು ಶಿವಸೇನಾಹಿರಿಯ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಮಂಗಳವಾರ ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಮತ್ತು ಅಧಿಕಾರ ಹಂಚಿಕೆ ಬಗ್ಗೆ ಬಿಜೆಪಿ ಮಾತು ಉಳಿಸಿಕೊಂಡಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಸೀಟುಗಳನ್ನು ಗೆದ್ದುಕೊಂಡಿತ್ತು. ಶಿವಸೇನಾ 56, ಎನ್‌ಸಿಪಿ- 54 ಮತ್ತು ಕಾಂಗ್ರೆಸ್ 44 ಸೀಟುಗಳನ್ನು ಗೆದ್ದಿದ್ದು, ಬಹುಮತ 145 ಆಗಿದೆ. ಸ್ವತಂತ್ರ ಮತ್ತು ಇತರ ಸಣ್ಣ ಪುಟ್ಟ ಪಕ್ಷಗಳು 29 ಸೀಟುಗಳನ್ನು ಗೆದ್ದಿವೆ .
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಿರೋಲ್‌ನಿಂದ ಗೆದ್ದ ರಾಜೇಂದ್ರ ಪಾಟಿಲ್ ಯಾದ್ರವ್ಕರ್ ಶಿವಸೇನೆಗೆ ಬೆಂಬಲ ನೀಡುವುದಾಗಿ ಹೇಳಿದ್ದರಿಂದ ಸೇನೆಯ ಬಲ ಹೆಚ್ಚಿದೆ. ಅದೇ ವೇಳೆ 8 ಸ್ವತಂತ್ರ ಅಥವಾ ಬಂಡಾಯ ಶಾಸಕರು ತಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ. ಹಾಗಾಗಿ ಶಿವಸೇನಾ ಪರ 64 ಶಾಸಕರಿದ್ದಾರೆ.
ಇದನ್ನೂ ಓದಿ:‘ಶಿವಸೇನಾಗೆ ಸಿ.ಎಂ ಹುದ್ದೆ ಇಲ್ಲ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.