ADVERTISEMENT

ನಾಸಿಕ್‌: ಥಂಬ್ಸ್‌ ಅಪ್‌ ಶಿಖರದಿಂದ ಬಿದ್ದು ಇಬ್ಬರು ಚಾರಣಿಗರು ಸಾವು, ಓರ್ವ ಗಂಭೀರ

ಪಿಟಿಐ
Published 3 ಫೆಬ್ರುವರಿ 2022, 9:46 IST
Last Updated 3 ಫೆಬ್ರುವರಿ 2022, 9:46 IST
'ಥಂಬ್ಸ್‌ ಅಪ್‌' ಎಂದು ಕರೆಯಲ್ಪಡುವ ಹಡಬೀಚಿ ಶೆಂಡಿ ಶಿಖರ (ಚಿತ್ರ: deshdoot.com)
'ಥಂಬ್ಸ್‌ ಅಪ್‌' ಎಂದು ಕರೆಯಲ್ಪಡುವ ಹಡಬೀಚಿ ಶೆಂಡಿ ಶಿಖರ (ಚಿತ್ರ: deshdoot.com)   

ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಚಂದ್‌ವಾಡ್‌ ಪ್ರದೇಶದ ಶಿಖರವೊಂದರಿಂದ ಬಿದ್ದು ಇಬ್ಬರು ಚಾರಣಿಗರು ಮೃತಪಟ್ಟಿದ್ದಾರೆ. ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಂತ ಕಠಿಣ ಚಾರಣಗಳಲ್ಲಿ ಒಂದಾದ ಮನ್ನದ್‌ ಸಮೀಪದ 'ಥಂಬ್ಸ್‌ ಅಪ್‌ ಶಿಖರ' ಎಂದು ಕರೆಯಲ್ಪಡುವ ಹಡಬೀಚಿ ಶೆಂಡಿ ಎಂಬಲ್ಲಿ ಬುಧವಾರ ರಾತ್ರಿ ದುರ್ಘಟನೆ ಸಂಭವಿಸಿದೆ.

ಅಹಮದ್‌ನಗರ್‌ನಿಂದ ಆಗಮಿಸಿದ್ದ ಕನಿಷ್ಠ 18 ಚಾರಣಿಗರ ತಂಡ 120 ಅಡಿ ಎತ್ತರದಶಿಖರವನ್ನು ಯಶಸ್ವಿಯಾಗಿ ಹತ್ತಿದ್ದರು. ಬಳಿಕ ಕೆಳಗಿಳಿಯುವ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸುಮಾರು 110 ಅಡಿ ಎತ್ತರದಿಂದ ಕೆಳಗೆ ಬಿದ್ದ ಇಬ್ಬರು ಚಾರಣಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಗೊಂಡ ಚಾರಣಿಗನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಚಾರಣಿಗರಲ್ಲಿ ಒಬ್ಬರಾದ ಪ್ರಶಾಂತ್‌ ಪರದೇಶಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.