ಥಾಣೆ: ಇಲ್ಲಿನ ಜೋಶಿ ಬೇಡೇಕರ್ ಕಾಲೇಜಿನ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ) ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿ ಅಮಾನುಷವಾಗಿ ಥಳಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಹಲ್ಲೆ ನಡೆಸಿದವನ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.
ವಿಡಿಯೊದಲ್ಲಿ, ಎಂಟು ಯುವಕರು ಕೆಸರಿನಲ್ಲಿ ತಲೆ ನೆಲಕ್ಕೆ ಹಾಕಿ ಕೈಗಳನ್ನು ಹಿಂದಕ್ಕೆ ಕಟ್ಟಿ ಕುಳಿತಿದ್ದಾರೆ. ಯುವಕರನ್ನು ಒಬ್ಬ ವ್ಯಕ್ತಿ ಕೋಲಿನಿಂದ ರಭಸವಾಗಿ ಹೊಡೆಯುವುದನ್ನು ನೋಡಬಹುದಾಗಿದೆ.
ಅಪರಿಚಿತ ವಿದ್ಯಾರ್ಥಿಯೊಬ್ಬ ಈ ಆಘಾತಕಾರಿ ಕೃತ್ಯದ ವಿಡಿಯೊ ರೆಕಾರ್ಡ್ ಮಾಡಿದ್ದಾರೆ.
‘ಇದು ಅತ್ಯಂತ ಖಂಡನೀಯ ಘಟನೆ. ಈ ಸಂಬಂಧ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ. ವಾಸ್ತವವಾಗಿ, ನಾವು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ’ಎಂದು ಪ್ರಾಂಶುಪಾಲರಾದ ಡಾ ಸುಚಿತ್ರಾ ನಾಯ್ಕ್ ಹೇಳಿದ್ದಾರೆ.
ವಿಡಿಯೊದಲ್ಲಿ ಹಲ್ಲೆ ನಡೆಸುತ್ತಿರುವರ ವ್ಯಕ್ತಿ ಎನ್‌ಸಿಸಿ ಕೆಡೆಟ್ ಎಂದೂ ಅವರು ಹೇಳಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸಮಿತಿಯನ್ನು ಸಹ ರಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಸುಮಾರು 40 ವರ್ಷಗಳಿಂದ ಇಲ್ಲಿ ಎನ್‌ಸಿಸಿ ತರಬೇತಿ ನಡೆಯುತ್ತಿದ್ದು, ಬೋಧಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ.
ಎನ್‌ಸಿಪಿ ಶಾಸಕ ಡಾ ಜಿತೇಂದ್ರ ಅವ್ಹಾದ್ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಈ ಅಮಾನುಷ ಘಟನೆಯ ವಿರುದ್ಧ ಸರ್ಕಾರ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.