ADVERTISEMENT

ದಿನಕ್ಕೆ 50- 75 ಕಿತ್ತಲೆ ಹಣ್ಣು ತಿನ್ನಲು ಮುಂದಾಗಿದ್ದ ಮಹಾತ್ಮ

ಡಯಟ್‌ನಲ್ಲೂ ರಾಷ್ಟ್ರಪಿತನ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 0:09 IST
Last Updated 1 ಏಪ್ರಿಲ್ 2019, 0:09 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ನವದೆಹಲಿ: ಸರಳ ಜೀವನಕ್ಕೆ ಹೆಸರಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದಿನದ ಆಹಾರವಾಗಿ ಡಜನ್ ಇಲ್ಲವೇ ಎರಡು ಡಜನ್‌ ಕಿತ್ತಲೆಗಳನ್ನು ಮಾತ್ರವೇ ತಿನ್ನಲು ಒಮ್ಮೆ ತೀರ್ಮಾನಿಸಿದ್ದರು. ಆದರೆ ಅವರ ವೈದ್ಯರು ಇದಕ್ಕೆ ಒಪ್ಪಿರಲಿಲ್ಲ.

ದೇಹಕ್ಕೆ ಬೇಕಾದ ಪೌಷ್ಟಿಕಾಂಶದ ಮೂಲ ಕೇವಲ ಕಿತ್ತಲೆ ಹಣ್ಣುಗಳು ಮಾತ್ರವೇ ಆಗಿದ್ದರೆ 50 ರಿಂದ 75 ಕಿತ್ತಲೆಹಣ್ಣುಗಳನ್ನು ತಿನ್ನಬೇಕಾಗುತ್ತದೆ ಎಂಬ ಸಲಹೆ ನೀಡಿದ್ದರು.

ಆದರೆ ದಿನವೊಂದರಲ್ಲಿ ಆಹಾರವಾಗಿ ಅಷ್ಟೊಂದು ಸಂಖ್ಯೆಯಲ್ಲಿ ಕಿತ್ತಲೆಹಣ್ಣುಗಳನ್ನು ಮಾತ್ರವೇ ತಿಂದರೆ ಅತಿಸಾರ ಕಾಡುವ ಸಾಧ್ಯತೆ ಇರುತ್ತದೆ ಎಂದು ಡಯಟ್‌ ತಜ್ಞರೊಬ್ಬರು ಎಚ್ಚರಿಸಿದ್ದರು. ಆಹಾರದಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇದ್ದ ಬಾಪು ಅವರಿಗೆ ಕಿತ್ತಲೆಯೂ ಪ್ರಯೋಗದ ಭಾಗವಾಗಿತ್ತು.

ADVERTISEMENT

ಗಾಂಧಿ ಅವರ ಆರೋಗ್ಯ ದಾಖಲೆಗಳಲ್ಲಿ ಇಂತಹ ಅಚ್ಚರಿಯ ಅಂಶಗಳಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇತ್ತೀಚೆಗೆ ಇವುಗಳನ್ನು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.