ನವದೆಹಲಿ: ದೆಹಲಿಯ ನ್ಯಾಷನಲ್ ಗಾಂಧಿ ಮ್ಯೂಸಿಯಂಗೆ ಭೇಟಿ ನೀಡಿದರೆ ಅಲ್ಲಿ ಮಹಾತ್ಮ ಗಾಂಧಿಯವರ ಹೃದಯ ಬಡಿತವನ್ನು ಕೇಳಬಹುದು. ಹೌದು, ಮಹಾತ್ಮ ಗಾಂಧಿಯವರ ಹೃದಯ ಬಡಿತವನ್ನು ಇಲ್ಲಿ ಮರುಸೃಷ್ಟಿ ಮಾಡಿದ್ದು, ಗಾಂಧಿ ಜಯಂತಿಯಂದು ಈ ಡಿಜಿಟಲ್ ವ್ಯವಸ್ಥೆ ಉದ್ಘಾಟನೆಯಾಗಲಿದೆ.
ಗಾಂಧೀಜಿಯ ಇ.ಸಿ.ಜಿ ವರದಿಯನ್ನು ಆಧರಿಸಿ ಡಿಜಿಟಲ್ ಹೃದಯ ಬಡಿತ ತಯಾರಿಸಲಾಗಿದೆ ಎಂದು ಮ್ಯೂಸಿಯಂ ನಿರ್ದೇಶಕ ಎ. ಅಣ್ಣಾಮಲೈ ಹೇಳಿದ್ದಾರೆ.1934ರಲ್ಲಿ ತೆಗೆದ ಇ.ಸಿ.ಜಿ ವರದಿಯನ್ನು ಇದಕ್ಕೆ ಬಳಸಲಾಗಿದೆ.
ಅಧಿಕ ರಕ್ತದೊತ್ತಡವಿದ್ದ ಗಾಂಧೀಜಿ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಡಾ.ಜೀವ್ ರಾಂ ಮೆಹ್ತಾ, ಡಾ.ಬಿ.ಸಿ ರಾಯ್ ಎಂಬ ವೈದ್ಯರು ನಿರಂತರವಾಗಿ ತಪಾಸಣೆ ಮಾಡುತ್ತಿದ್ದರು.
ಗಾಂಧೀಜಿಯವರ ಆರೋಗ್ಯ ಬಗ್ಗೆ ಇರುವ ಪ್ರಧಾನ ಮಾಹಿತಿಗಳನ್ನು ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಶೀಘ್ರದಲ್ಲೇ ಪ್ರಕಟಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.