ADVERTISEMENT

Mahua Moitra: ಆರೋಪದಿಂದ ಉಚ್ಚಾಟನೆವರೆಗೆ.. ಆಗಿದ್ದೇನು?

ಪಿಟಿಐ
Published 8 ಡಿಸೆಂಬರ್ 2023, 18:31 IST
Last Updated 8 ಡಿಸೆಂಬರ್ 2023, 18:31 IST
<div class="paragraphs"><p>ಸಂಸತ್ತಿನಿಂದ ಹೊರನಡೆದ ಮಹುವಾ ಮೋಯಿತ್ರಾ</p></div>

ಸಂಸತ್ತಿನಿಂದ ಹೊರನಡೆದ ಮಹುವಾ ಮೋಯಿತ್ರಾ

   

ಪಿಟಿಐ ಚಿತ್ರ

ನವದೆಹಲಿ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ಹಾಗೂ ಉಡುಗೊರೆಗಳನ್ನು ಪಡೆದ ಆರೋಪಕ್ಕೆ ಒಳಗಾಗಿ, ಲೋಕಸಭಾ ಸದಸ್ಯತ್ವದಿಂದ ಉಚ್ಚಾಟನೆಯಾಗುವವರೆಗಿನ ಬೆಳವಣಿಗೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ADVERTISEMENT
  • ಸಿಬಿಐಗೆ ದೂರು (ಅ.14): ಸುಪ್ರೀಂ ಕೋರ್ಟ್‌ ವಕೀಲ ಜೈ ಅನಂತ್‌ ದೆಹಾದ್ರಾಯ್ ಅವರು ಭ್ರಷ್ಟಾಚಾರ ಮತ್ತು ಹಣದ ಅಕ್ರಮ ವರ್ಗಾವಣೆ ಆರೋಪ ಹೊರಿಸಿ ಮಹುವಾ ವಿರುದ್ಧ ಸಿಬಿಐಗೆ ದೂರು ನೀಡಿ, ದೂರಿನ ಪ್ರತಿಯನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೂ ಕಳುಹಿಸಿದರು.

  • ಸ್ಪೀಕರ್‌ಗೆ ದುಬೆ ದೂರು (ಅ.15): ಮಹುವಾ ಅವರು ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ಹಾಗೂ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರಿಂದ ಸ್ಪೀಕರ್‌ ಓಂ ಬಿರ್ಲಾಗೆ ದೂರು. ಜೈ ಅನಂತ್, ಸಿಬಿಐಗೆ ನೀಡಿದ್ದ ದೂರಿನಲ್ಲಿರುವ ಮಾಹಿತಿ ಆಧರಿಸಿ ಸ್ಪೀಕರ್‌ಗೆ ದೂರು ನೀಡಿದ್ದಾಗಿ ದುಬೆ ಹೇಳಿಕೆ. ಆರೋಪ ಅಲ್ಲಗಳೆದ ಮಹುವಾ.

  • ಉದ್ಯಮಿ ಹೀರಾನಂದಾನಿ ಹೇಳಿಕೆ (ಅ.20): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಿಸುಮುರಿಸು ಉಂಟುಮಾಡಲು ಮಹುವಾ, ಉದ್ಯಮಿ ಗೌತಮ್‌ ಅದಾನಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು ಎಂದು ಉದ್ಯಮಿ ದರ್ಶನ್‌ ಹೀರಾನಂದಾನಿ ಆರೋಪ. ಮಹುವಾ ನೀಡಿದ್ದ ಸಂಸತ್‌ ಸದಸ್ಯತ್ವದ ಇ–ಮೇಲ್ ಐ.ಡಿ ಬಳಸಿ ತಾವು ಕಳುಹಿಸುತ್ತಿದ್ದ ಮಾಹಿತಿ ಆಧರಿಸಿ ಸಂಸತ್‌ನಲ್ಲಿ ಪ್ರಶ್ನೆ ಕೇಳುತ್ತಿದ್ದರು ಎಂದು ಪ್ರಮಾಣಪತ್ರದಲ್ಲಿ ಹೇಳಿಕೆ.

  • ಸಿಬಿಐ ಮತ್ತು ಸಂಸತ್‌ನ ನೀತಿ ನಿಯಮಗಳ ಸಮಿತಿಯಿಂದ ಕರೆಬಂದರೆ ಸೂಕ್ತ ಉತ್ತರ ನೀಡಲು ಸಿದ್ಧ ಎಂದು ಮಹುವಾ ಪ್ರತಿಕ್ರಿಯೆ

  • ಸಂಸತ್‌ ಐ.ಡಿ ದುಬೈನಲ್ಲಿ ಬಳಕೆ (ಅ.21): ಮಹುವಾ ಅವರ ಸಂಸತ್‌ನ ಲಾಗಿನ್‌ ಮತ್ತು ಪಾಸ್‌ವರ್ಡ್‌ ದುಬೈನಲ್ಲಿ ಬಳಕೆಯಾಗಿದೆ ಎಂದು ಆರೋಪಿಸಿದ ನಿಶಿಕಾಂತ್ ದುಬೆ

  • ವಿಚಾರಣೆಗೆ ಹಾಜರಾಗಲು ಸೂಚನೆ (ಅ.26): ಮಹುವಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ನೀತಿ ಸಮಿತಿಯ ಮೊದಲ ಸಭೆ. ಜೈ ಅನಂತ್‌ ದೆಹಾದ್ರಯ್ ಮತ್ತು ದುಬೆ ಅವರ ಹೇಳಿಕೆ ದಾಖಲು. ಅ.31ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮಹುವಾಗೆ ಸೂಚನೆ

  • ನ.2ಕ್ಕೆ ಮರುನಿಗದಿ: ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ 31ಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಮಿತಿಗೆ ಸಂಸದೆ ಪತ್ರ. ವಿಚಾರಣೆ ದಿನಾಂಕ ನವೆಂಬರ್‌ 2ಕ್ಕೆ ಮರುನಿಗದಿ

  • 47 ಬಾರಿ ಲಾಗಿನ್ (ನ.1): ಮಹುವಾ ಅವರ ಸಂಸತ್‌ನ ಖಾತೆಗೆ ದುಬೈನಲ್ಲಿ 47 ಬಾರಿ ಲಾಗಿನ್‌ ಮಾಡಲಾಗಿತ್ತು ಎಂಬ ಹೊಸ ಆರೋಪ 

  • ಸಭೆಯಿಂದ ಹೊರನಡೆದ ಮಹುವಾ (ನ.2): ಲೋಕಸಭೆಯ ‘ನೀತಿ ಸಮಿತಿ’ ಸಭೆ ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿ. ಸಮಿತಿಯ ಅಧ್ಯಕ್ಷ ವಿನೋದ್ ಸೋನಕರ್ ಅವರು ಮಹುವಾ ಅವರಿಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಆರೋಪಿಸಿ ಸಭೆಯಿಂದ ಹೊರನಡೆದ ವಿರೋಧ ಪಕ್ಷಗಳ ನಾಯಕರು ಹಾಗೂ ಮಹುವಾ

  • ತನಿಖೆಗೆ ಸಿದ್ಧ (ನ.3): ತಮ್ಮ ವಿರುದ್ಧದ ಆರೋಪಗಳ ಕುರಿತ ವಿಚಾರಣೆಗೆ ಸಹಕರಿಸಲು ಸಿದ್ಧ, ಆದರೆ ವಿಚಾರಣೆ ವೇಳೆ ಸಭ್ಯತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಮಹುವಾ ಹೇಳಿಕೆ 

  • ಉಚ್ಚಾಟನೆಗೆ ಶಿಫಾರಸು (ನ.9): ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕು ಎಂದು ನೀತಿ ನಿಯಮಗಳ ಸಮಿತಿಯಿಂದ ಶಿಫಾರಸು 

  • ಚರ್ಚೆಗೆ ಆಗ್ರಹ (ಡಿ.2): ಉಚ್ಚಾಟನೆ ಶಿಫಾರಸು ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಬೇಕು. ಚರ್ಚೆ ಬಳಿಕವೇ ಉಚ್ಚಾಟನೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಟಿಎಂಸಿ ಪಕ್ಷದ ನಾಯಕರ ಆಗ್ರಹ. ಉಚ್ಚಾಟನೆ ಶಿಫಾರಸು ಮರುಪರಿಶೀಲಿಸುವಂತೆ ಕೋರಿ ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರಿಂದ ಸ್ಪೀಕರ್‌ಗೆ ಪತ್ರ

  • ಉಚ್ಚಾಟನೆ (ಡಿ.8): ಮಹುವಾ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ನೀತಿ ಸಮಿತಿಯ ವರದಿ ಲೋಕಸಭೆಯಲ್ಲಿ ಮಂಡನೆ. ಅದರ ಬೆನ್ನಲ್ಲೇ ಲೋಕಸಭಾ ಸದಸ್ಯತ್ವದಿಂದ ಉಚ್ಚಾಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.