ADVERTISEMENT

ಕಾನೂನುಬಾಹಿರ ನಡೆ ಮೂಲಕ ಚುನಾವಣಾ ಪ್ರಚಾರಕ್ಕೆ ಅಡ್ಡಿ: CBI ವಿರುದ್ಧ ಮಹುವಾ ದೂರು

ಡೆಕ್ಕನ್ ಹೆರಾಲ್ಡ್
Published 24 ಮಾರ್ಚ್ 2024, 13:01 IST
Last Updated 24 ಮಾರ್ಚ್ 2024, 13:01 IST
   

ನವದೆಹಲಿ: ಸಿಬಿಐ ತನಿಖೆಯ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಕೋರಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

'ಕಾನೂನುಬಾಹಿರ ಮತ್ತು ಅಸಮಂಜಸ ನಡೆಗಳ ಮೂಲಕ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಲು ಸಿಬಿಐ ಪ್ರಯತ್ನಿಸುತ್ತಿದೆ. ನೀತಿ ಸಂಹಿತೆಯ ಅವಧಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಬೇಕು' ಎಂದೂ ಮಹುವಾ ಆಗ್ರಹಿಸಿದ್ದಾರೆ.

ಮಹುವಾ ಮೊಯಿತ್ರಾ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ:

ADVERTISEMENT

ಕಾಸಿಗಾಗಿ ಪ್ರಶ್ನೆ ಪ್ರಕರಣ ಸಂಬಂಧ ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರ ಕಚೇರಿ ಮತ್ತು ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳು ಶನಿವಾರ (ಮಾರ್ಚ್‌ 23) ದಾಳಿ ಮಾಡಿದ್ದರು. ಈ ಪ್ರಕರಣ ಸಂಬಂಧ ಲೋಕಪಾಲ್‌ ನಿರ್ದೇಶನದ ಮೇಲೆ ಸಿಬಿಐ, ಮಹುವಾ ಮೊಯಿತ್ರಾ ವಿರುದ್ಧ ಶುಕ್ರವಾರ ಎಫ್‌ಐಆರ್‌ ದಾಖಲಿಸಿತ್ತು.

ಶನಿವಾರ ಬೆಳಗ್ಗೆ ಮಹುವಾ ಮೊಯಿತ್ರಾ ಅವರ ಕೋಲ್ಕತ್ತ ನಿವಾಸ, ಕಚೇರಿ ಸೇರಿದಂತೆ ದೆಹಲಿ ಕಚೇರಿಗಳ ಮೇಲೆಯೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.

ಮಹುವಾ ಅವರು ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.