ADVERTISEMENT

ಶತ್ರುಘ್ನ ಸಿನ್ಹಾ ನಂತರ ಜಿನ್ನಾ 'ಹೋರಾಟ' ಹೊಗಳಿದ ಎನ್‍ಸಿಪಿ ನಾಯಕ ಮಜೀದ್ ಮೆಮನ್

ಏಜೆನ್ಸೀಸ್
Published 28 ಏಪ್ರಿಲ್ 2019, 10:57 IST
Last Updated 28 ಏಪ್ರಿಲ್ 2019, 10:57 IST
   

ಮುಂಬೈ: ಮುಹಮ್ಮದ್ ಅಲಿ ಜಿನ್ನಾ ಕಾಂಗ್ರೆಸ್ ಕುಟುಂಬಕ್ಕೆ ಸೇರಿದವರು ಎಂದು ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದರು.ಸಿನ್ಹಾ ಹೇಳಿಕೆ ಬೆನ್ನಲ್ಲೇ ಇದೀಗ ಎನ್‌ಸಿಪಿ ನಾಯಕ ಮಜೀದ್ ಮೆಮನ್ ಜಿನ್ನಾ ಪರ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ಅಲಿ ಜಿನ್ನಾ ಸ್ವಾತಂತ್ರ್ಯಹೋರಾಟಕ್ಕಾಗಿ ಕೊಡುಗೆ ನೀಡಿದ್ದಾರೆ.ಜಿನ್ನಾ ಮುಸ್ಲಿಂ ಆಗಿದ್ದರಿಂದಲೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿನ್ಹಾ ಅವರನ್ನು ದೇಶದ್ರೋಹಿ ಅಂತಾರೆ ಎಂದು ಮೆಮನ್ ಹೇಳಿದ್ದಾರೆ.

ಮಹಾತ್ಮಗಾಂಧಿಯಿಂದ ಹಿಡಿದು ಮುಹಮ್ಮದ್ ಅಲಿ ಜಿನ್ನಾವರೆಗೆ ಎಲ್ಲರೂ ಕಾಂಗ್ರೆಸ್ ಕುಟುಂಬಕ್ಕೆ ಸೇರಿದವರು ಎಂದು ಶತ್ರುಘ್ನ ಸಿನ್ಹಾ ಶನಿವಾರ ಹೇಳಿದ್ದರು.ಈ ಹೇಳಿಕೆ ಬಗ್ಗೆ ಮೆಮನ್ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಶತ್ರುಘ್ನ ಸಿನ್ಹಾ ಅವರು ನಿನ್ನೆವರೆಗೆ ಬಿಜೆಪಿಯಲ್ಲಿದ್ದರು ಎಂಬುದು ಅಮಿತ್ ಶಾ ಅವರಿಗೆ ನೆನಪಿರಲಿ.ಅವರೇನಾದರೂ ದೇಶದ್ರೋಹದ ಹೇಳಿಕೆ ನೀಡಿದ್ದರೆ ಅದು ಬಿಜೆಪಿಯಿಂದಲೇ ಕಲಿತದ್ದು.

ಇಷ್ಟು ಹೇಳಿದ ನಂತರ ಮಾತು ಮುಂದುವರಿಸಿದ ಮೆಮನ್, ಜಿನ್ನಾ ಅವರು ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರೊಬ್ಬ ಮುಸ್ಲಿಂ ಆಗಿದ್ದರಿಂದಲೇ ಅವರ ಬಗ್ಗೆ ಅಸಮಾಧಾನ ಹೊಂದಿರುವ ಬಿಜೆಪಿ ಶತ್ರುಘ್ನ ಸಿನ್ಹಾರನ್ನು ದೇಶದ್ರೋಹಿ ಎನ್ನುತ್ತಿದೆ ಎಂದಿದ್ದಾರೆ.

ADVERTISEMENT

ಮಧ್ಯಪ್ರದೇಶದ ಚಿಂದ್‌ವಾರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಶತ್ರುಘ್ನ ಸಿನ್ಹಾ, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಮತ್ತು ಜವಾಹರ್ ಲಾಲ್ ನೆಹರೂ ಜತೆ ಮುಹಮ್ಮದ್ ಅಲಿ ಜಿನ್ನಾ ಕೂಡಾ ಸ್ವಾತಂತ್ರ್ಯ ಹೋರಾಟ ಮಾಡಿದ್ದರು ಎಂದು ಹೇಳಿದ್ದರು.
ಆಮೇಲೆ ತಾನು ಬಾಯ್ತಪ್ಪಿನಿಂದ ಈ ರೀತಿ ಹೇಳಿದೆ ಎಂದಿದ್ದಾರೆ.

ಶತ್ರುಘ್ನ ಸಿನ್ಹಾ ಅವರು ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.