ADVERTISEMENT

ಭಾರತವು ಜ್ಞಾನಿಗಳ ದೇಶವಾಗಲಿ: ಮೋಹನ್‌ ಭಾಗವತ್‌

ಪಿಟಿಐ
Published 26 ಜನವರಿ 2023, 11:20 IST
Last Updated 26 ಜನವರಿ 2023, 11:20 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಜೈಪುರ: ಭಾರತವನ್ನು ಜ್ಞಾನವುಳ್ಳ ಜನರ ದೇಶವನ್ನಾಗಿ ಮಾಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಗುರುವಾರ ಸಲಹೆ ನೀಡಿದರು.

ಇಲ್ಲಿಗೆ ಸಮೀಪದ ಜಾಮ್ಡೋಲಿಯ ಕೇಶವ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜದ ಮೂರು ಬಣ್ಣಗಳ ಮಹತ್ವವನ್ನು ಬಣ್ಣಿಸಿದರು.

‘ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಣ್ಣವು ಭಾರತದ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಅದು ಶಾಶ್ವತ ಬದುಕಿನ, ಜ್ಞಾನ ಮತ್ತು ಕಠಿಣ ಪರಿಶ್ರಮದ ಸಂಕೇತವೂ ಹೌದು’ ಎಂದರು.

ADVERTISEMENT

‘ಬಿಳಿ ಬಣ್ಣವು ಪರಿಶುದ್ಧತೆಯ ಸಂಕೇತವಾದರೆ, ಹಸಿರು ಬಣ್ಣವು ಸಮೃದ್ಧಿಯ ಸಂಕೇತ’ ಎಂದೂ ಹೇಳಿದರು.

‘ಗುಲಾಮತನದ ಸಂಕೋಲೆಯನ್ನು ಮುರಿಯುವುದು ನಮ್ಮ ಸಂಕಲ್ಪವಾಗಿದೆ. ಪ್ರಪಂಚದ ಹಿತಾಸಕ್ತಿಯಲ್ಲಿ ನಿರಂತರ ಸಕ್ರಿಯರಾಗಿರುವ ಜನರಿರುವ ದೇಶ ನಮ್ಮದು’ ಎಂದು ತಿಳಿಸಿದರು.

‘ಸಂವಿಧಾನವನ್ನು ಲೋಕಾರ್ಪಣೆ ಮಾಡಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂಸತ್‌ನಲ್ಲಿ ಮಾಡಿರುವ ಭಾಷಣವನ್ನು ಜನರು ಓದಬೇಕು’ ಎಂದೂ ಭಾಗವತ್‌ ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.