ಕೇರಳ: ಕೋವಿಡ್ 19ರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಲು ಕೇರಳದ ಮಲ್ಲಾಪುರಂ ಜಿಲ್ಲೆಯ ಶಾಲೆಯೊಂದು ಆರೋಗ್ಯ ಕಾರ್ಯಕರ್ತರ ರೇಖಾಚಿತ್ರಗಳಿರುವ ನೋಟ್ಬುಕ್ಗಳನ್ನು ಸಿದ್ಧಪಡಿಸಿದೆ.
ವಾಲನ್ಚೆರಿಯ ಸಮೀಪದ ವೆಂಗಾಡ್ನಲ್ಲಿರುವ ಟಿಆರ್ಕೆಎ ಯುಪಿ ಶಾಲೆಯು ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರ ತ್ಯಾಗವನ್ನು ಅರ್ಥ ಮಾಡಿಸಲು ಈ ಕ್ರಮವನ್ನು ಕೈಗೊಂಡಿದೆ.
ಸದ್ಯಕ್ಕೆ ಆರೋಗ್ಯ ಕಾರ್ಯಕರ್ತರ ರೇಖಾಚಿತ್ರಗಳ ಮುಖಪುಟವಿರುವ 500 ನೋಟ್ಬುಕ್ಗಳನ್ನು ಹೊರತಂದಿದೆ. ಇದರಲ್ಲಿ ಪ್ರಮುಖವಾಗಿ ನಿಫಾ ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ಕರ್ತವ್ಯದಲ್ಲಿದ್ದಾಗಲೇ ಪ್ರಾಣ ತೆತ್ತ ದಾದಿ ಲಿನಿ ಅವರ ರೇಖಾಚಿತ್ರವಿದೆ. ಕಲಾವಿದರಾದ ಒ.ಸಿ. ಮಾರ್ಟಿನ್ ಹಾಗೂ ಸುಮೇಶ್ ಈ ಎಲ್ಲ ಚಿತ್ರಗಳನ್ನು ರಚಿಸಿದ್ದಾರೆ. ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಸಂದೇಶಗಳನ್ನು ಮುಖಪುಟದಲ್ಲಿ ನೀಡಲಾಗಿದೆ.
ಶಾಲೆಯ ಪ್ರಾಂಶುಪಾಲ ಪಿ.ಕೆ.ಸುಭಾಶ್ ಹೇಳುವಂತೆ, ‘ ಬಡ ಕುಟುಂಬದಿಂದ ಮಕ್ಕಳಿಗೆ ಈ ಪುಸ್ತಕಗಳನ್ನು ಹಂಚಲಾಗುವುದು. ಶಾಲೆಗಳು ಆರಂಭಗೊಂಡಿದ್ದರೆ, ಭಿನ್ನ ಕಾರ್ಯಕ್ರಮದ ಮೂಲಕ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಬಹುದಿತ್ತು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.