ADVERTISEMENT

ಮಲಪ್ಪುರಂ ಕವಳಪ್ಪಾರದಲ್ಲಿ ಭೂಕುಸಿತ; 50 ಕುಟುಂಬಗಳು ಸಿಲುಕಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 13:00 IST
Last Updated 9 ಆಗಸ್ಟ್ 2019, 13:00 IST
   

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಕವಳಪ್ಪಾರ ಎಂಬಲ್ಲಿಭೂಕುಸಿತದಿಂದ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಪೋತ್ತುಕಲ್ಲಿನ ಬಳಿ ಇರುವ ದೊಡ್ಡ ಗುಡ್ಡವೊಂದು ಕುಸಿದು ಬಿದ್ದು ಈ ದುರಂತ ಸಂಭವಿಸಿದೆ.ಸುಮಾರು 50ರಷ್ಟು ಕುಟುಂಬಗಳು ಮಣ್ಣಿನಡಿಯಲ್ಲಿ ಸಿಲುಕಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಹೀಗಾಗಿದ್ದರೆ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ಗುರುವಾರ ರಾತ್ರಿ ಎಂಟೂವರೆಗೆ ಇಲ್ಲಿ ಭೂಕುಸಿತವುಂಟಾಗಿದೆ.ಒಂದೆಡೆ ಗುಡ್ಡದಿಂದ ಕಲ್ಲುಗಳುರುಳಿದ್ದರೆ ಇನ್ನೊಂದಡೆಯಿಂದ ಮಣ್ಣು ಕುಸಿದಿದ್ದರಿಂದ ಇಲ್ಲಿನ ಕುಟುಂಬಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡವು.

ADVERTISEMENT

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ತುಕಡಿ ಇಲ್ಲಿಗೆ ಆಗಮಿಸಿದ್ದು, ಜೆಸಿಬಿಗೆ ಮಾತ್ರ ಇಲ್ಲಿ ರಕ್ಷಣಾ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ.

ಹತ್ತಿರದ ಪ್ರದೇಶಗಳಲ್ಲಿ ಭೂಕುಸಿತ ಭೀತಿಯಿರುವ ಕಾರಣ ಸಂಜೆ ಹೊತ್ತಿಗೆ ರಕ್ಷಣಾ ಕಾರ್ಯಗಳನ್ನು ನಿಲ್ಲಿಸಲಾಗುವುದು.ದುರಂತ ನಡೆದು ಒಂದು ದಿನ ಕಳೆದ ಕಾರಣ ಮಣ್ಣಿನಡಿಯಲ್ಲಿ ಸಿಲುಕಿರುವವರ ಪ್ರಾಣ ರಕ್ಷಣೆ ಅಸಾಧ್ಯ ಎಂದೆನಿಸುತ್ತಿದೆ. ಮಳೆ ನೀರಿನಿಂದ ಕೆಸರು ತುಂಬಿದ್ದರಿಂದ ರಕ್ಷಣಾ ಕಾರ್ಯಗಳಿಗೂ ಅಡಚಣೆಯಾಗುತ್ತಿದೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.