ADVERTISEMENT

ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮಾಲ್ದೀವ್ಸ್‌ ಅಧ್ಯಕ್ಷರಿಗೂ ಆಹ್ವಾನ

ಪಿಟಿಐ
Published 6 ಜೂನ್ 2024, 16:09 IST
Last Updated 6 ಜೂನ್ 2024, 16:09 IST
<div class="paragraphs"><p>ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಮತ್ತು ಪ್ರಧಾನಿ ನರೇಂದ್ರ ಮೋದಿ</p></div>

ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಮತ್ತು ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರಿಗೂ ಆಮಂತ್ರಣ ನೀಡಲಾಗಿದೆ.

ADVERTISEMENT

ಇದೇ ಭಾನುವಾರ (ಜೂನ್‌9) ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಲಕ್ಷದ್ವೀಪ ಭೇಟಿ ಕುರಿತು ಮಾಲ್ದೀವ್ಸ್‌ನ ಸಚಿವರೊಬ್ಬರು ನರೇಂದ್ರ ಮೋದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ ಉಭಯ ದೇಶಗಳ ನಡುವೆ ವೈಮನಸ್ಸು ಉಂಟುಮಾಡಿತ್ತು. ಇದರ ಜತೆಗೆ, ಮಾಲ್ದೀವ್ಸ್‌ ಚೀನಾದತ್ತ ಹೆಚ್ಚು ವಾಲಿದ್ದು ಭಾರತದ ಅಸಮಧಾನಕ್ಕೆ ಕಾರಣವಾಗಿತ್ತು. ಇದರ ನಡುವೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಯಿಜು ಅವರಿಗೆ ಆಮಂತ್ರಣ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಭಾರತ ಮತ್ತು ಮಾಲ್ದೀವ್ಸ್‌ ನಡುವಿನ ಸಂಬಂಧ ಕಳೆದ ವರ್ಷ ನವೆಂಬರ್‌ನಿಂದ ತೀವ್ರ ಹದಗೆಟ್ಟಿತ್ತು. 

ಮುಯಿಜು ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಭಾರತದ ಸೇನೆಯನ್ನು ವಾಪಸ್‌ ಕರೆಯಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದರು. ಅದರಂತೆ ಭಾರತದ ಮಿಲಿಟರಿ ಸಿಬ್ಬಂದಿ ಮೇ ತಿಂಗಳಲ್ಲಿ ವಾಪಸ್ಸಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.