ಕೊಯಮತ್ತೂರು/ನವದೆಹಲಿ: ಬೆಂಗಳೂರಿನಿಂದ ಮಾಲ್ಡೀವ್ಸ್‌ಗೆ ಹೊರಟಿದ್ದ ಗೋ ಫಸ್ಟ್ ವಿಮಾನವೊಂದರಲ್ಲಿ ಶುಕ್ರವಾರ ಎಚ್ಚರಿಕೆ ಗಂಟೆ ಮೊಳಗಿದ ಪರಿಣಾಮ, ವಿಮಾನವನ್ನು ಕೊಯಮತ್ತೂರಿನಲ್ಲಿ ಇಳಿಸಲಾಯಿತು.
ಈ ವಿಮಾನದಲ್ಲಿ 92 ಮಂದಿ ಪ್ರಯಾಣಿಕರಿದ್ದರು. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಮತ್ತು ಅದರ ಕಾರ್ಯಾಚರಣೆ ವ್ಯವಸ್ಥೆ ಸರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನದ ಎರಡು ಎಂಜಿನ್‌ಗಳು ಹೆಚ್ಚು ಬಿಸಿಯಾದ ನಂತರ ಎಚ್ಚರಿಕೆ ಗಂಟೆ ಮೊಳಗುವುದು ನಿಂತಿದೆ. ಎಂಜಿನಿಯರ್‌ಗಳು ವಿಮಾನದ ಎಂಜಿನ್‌ಗಳನ್ನು ಪರಿಶೀಲಿಸಿದ್ದಾರೆ ಎಂದೂ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.