ADVERTISEMENT

ಮಾಲೆಗಾಂವ್‌ ಸ್ಫೋಟ: ಆರೋಪಿ ಜಾಮೀನು ರದ್ದು ಅರ್ಜಿ ತಿರಸ್ಕರಿಸಿದ ಎನ್‌ಐಎ 

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 14:27 IST
Last Updated 30 ಜೂನ್ 2022, 14:27 IST
   

ಮುಂಬೈ: ಮಾಲೆಗಾಂವ್ ಸ್ಫೋಟದ ಆರೋಪಿ ಸುಧಾಕರ್ ದ್ವೀವೇದಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತು ವಿಧಿಸಿ 2008ರ ಸ್ಫೋಟ ಪ್ರಕರಣದ ಆರೋಪಿಗೆ 2017ರಲ್ಲಿ ಜಾಮೀನು ನೀಡಲಾಗಿತ್ತು.

’ಕೋರ್ಟ್ ಅನುಮತಿ ಪಡೆಯದೆ, ಷರತ್ತು ಉಲ್ಲಂಘಿಸಿ ಸುಧಾಕರ್ ನೇಪಾಳಕ್ಕೆ ತೆರಳಿದ್ದಾರೆ. ಹಾಗಾಗಿ ಜಾಮೀನು ರದ್ದುಗೊಳಿಸಬೇಕು‘ ಎಂದು ಕೋರಿ ಸಂತ್ರಸ್ತರೊಬ್ಬರ ತಂದೆ ನಿಸಾರ್ ಅಹಮದ್ ಬಿಲಾಲ್‌ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ. ನೇಪಾಳ ಪ್ರವಾಸ ಕುರಿತು ಫೋಟೊಗಳನ್ನು ಸಹ ಕೋರ್ಟ್‌ಗೆ ಸಲ್ಲಸಿದ್ದರು.

ADVERTISEMENT

ಅರ್ಜಿ ತಿರಸ್ಕರಿಸಿದವಿಶೇಷ ನ್ಯಾಯಾಧೀಶ ಎ.ಕೆ.ಲಹೋಟಿ, ಇನ್ನು ಮುಂದೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸದಂತೆ ಆರೋಪಿಗೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.