ADVERTISEMENT

ಜಾಫ್ರಿ ಮೇಲ್ಮನವಿ 26ಕ್ಕೆ ಮುಂದೂಡಿಕೆ

ಗುಜರಾತ್‌ ದಂಗೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 19:24 IST
Last Updated 19 ನವೆಂಬರ್ 2018, 19:24 IST

ನವದೆಹಲಿ: 2002ರ ಗುಜರಾತ್‌ ಹಿಂಸಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಪ್ರಧಾನಿ ನರೇಂದ್ರಮೋದಿ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ, ಸಂತ್ರಸ್ತೆ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ನವೆಂಬರ್‌ 26ಕ್ಕೆ ಮುಂದೂಡಿದೆ.

ಮೋದಿ ಮತ್ತು 58 ಮಂದಿ ಇತರರಿಗೆ ಕ್ಲೀನ್‌ಚಿಟ್‌ ನೀಡಿ, ಎಸ್‌ಐಟಿ ಪ್ರಕರಣವನ್ನು ಅಂತ್ಯಗೊಳಿಸಿತ್ತು. ಈ ವರದಿಗೆ ಮ್ಯಾಜಿಸ್ಟ್ರೇಟ್‌ ಒಪ್ಪಿಗೆ ಸೂಚಿಸಿತ್ತು.

2002ರ ಫೆಬ್ರುವರಿ 28ರಂದು ಉದ್ರಿಕ್ತರ ಗುಂಪೊಂದು ಅಹ್ಮದಾಬಾದ್‌ನ ಗುಲ್ಬರ್ಗ್‌ ಸೊಸೈಟಿಯಲ್ಲಿ ನಡೆಸಿದ ಹತ್ಯಾಕಾಂಡದಲ್ಲಿ ಮಾಜಿ ಸಂಸದ ಎಹ್ಸಾನ್‌ ಜಾಫ್ರಿ ಸೇರಿ 68 ಮಂದಿ ಸಾವನ್ನಪ್ಪಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.