ಚಂಡೀಗಢ: ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಭೂಪಿಂದರ್ ಹೂಡಾ, ಕುಮಾರಿ ಸೆಲ್ಜಾ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ 40 ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಪಕ್ಷಕ್ಕೆ (ಕಾಂಗ್ರೆಸ್) ಸೇರ್ಪಡೆಗೊಂಡ ಕುಸ್ತಿಪಟುಗಳಾದ ವಿನೇಶ್ ಪೋಗಾಟ್ ಹಾಗೂ ಬಜರಂಗ್ ಪೂನಿಯಾ ಕೂಡ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇತರ ಪ್ರಮುಖ ಪ್ರಚಾರಕರಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಪಕ್ಷದ ಹರಿಯಾಣ ರಾಜ್ಯ ಉಸ್ತುವಾರಿ ದೀಪಕ್ ಬಬಾರಿಯಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉದಯ್ ಭಾನ್, ಅಜಯ್ ಮಕಾನ್, ಬಿರೇಂದರ್ ಸಿಂಗ್ , ಆನಂದ್ ಶರ್ಮಾ ಹಾಗೂ ಸಚಿನ್ ಪೈಲಟ್ ಸೇರಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹಲೋತ್, ಭೂಪೇಶ್ ಬಾಘೇಲ್, ಚರಂಜಿತ್ ಸಿಂಗ್ ಚನ್ನಿ ಕೂಡ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪ್ರತಾಪ್ ಸಿಂಗ್ ಬಾಜ್ವಾ, ಪವನ್ ಖೇರಾ, ದೀಪೇಂದರ್ ಸಿಂಗ್ ಹೂಡಾ, ರಾಜೀವ್ ಶುಕ್ಲಾ, ಸುಪ್ರಿಯಾ ಶ್ರೀನೇತ್, ಶ್ರೀನಿವಾಸ್. ಬಿ.ವಿ ಹಾಗೂ ಸುಭಾಷ್ ಬಾತ್ರಿ ಈ ಪಟ್ಟಿಯಲ್ಲಿರುವ ಇತರ ಹಿರಿಯ ನಾಯಕರು.
ಹಿಸಾರ್ ಮತ್ತು ಸೋನಿಪತ್ ಸಂಸದರಾದ ಜೈ ಪ್ರಕಾಶ್ ಮತ್ತು ಸತ್ಪಾಲ್ ಬ್ರಹ್ಮಚಾರಿ, ಇಮ್ರಾನ್ ಪ್ರತಾಪ್‌ಗಡಿ, ರಾಜ್ ಬಬ್ಬರ್, ಕನ್ಹಯ್ಯಾ ಕುಮಾರ್ ಮತ್ತು ಅಜಯ್ ಸಿಂಗ್ ಯಾದವ್ ಸೇರಿದಂತೆ ಇತರ ನಾಯಕರೂ ಪಕ್ಷದ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
90 ಸದಸ್ಯ ಬಲದ ಹರಿಯಾಣದ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.