ಕೊಲ್ಕತ್ತ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಬೇಕು. ಹಾಗೂ ರೈಲು ಟಿಕೆಟ್ ಬೆಲೆಗಳ ಮೇಲೆ ವಿಧಿಸುವ ಹೆಚ್ಚಿನ ದರವನ್ನು ಹಿಂಪಡೆಯಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬಾನ್ಯರ್ಜಿ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರೈಲು ದರಗಳು ಕೆಲವೊಮ್ಮೆ ವಿಮಾನ ದರಗಳಿಗಿಂತ ದುಬಾರಿಯಾಗಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಸುರಕ್ಷತೆ ಮತ್ತು ಸುಭದ್ರತೆ ಒದಗಿಸಬೇಕು. ರೈಲಿನ ದರಗಳು ದುಬಾರಿಯಾದರೆ ಸಾಮಾನ್ಯ ಜನರು ಹೇಗೆ ಪ್ರಯಾಣಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
‘ಈ ಹಿಂದೆ ನಾನು ರೈಲ್ವೆ ಸಚಿವೆಯಾಗಿದ್ದ ಸಮಯದಲ್ಲಿ ಅಪಘಾತ ನಿಯಂತ್ರಣ ಸಾಧನಗಳು ಹಾಗೂ ಅದಕ್ಕೆ ಸಂಬಂಧಿಸಿದ ಸುರಕ್ಷತಾ ಕ್ರಮಗಳನ್ನು ಪರಿಚಯಿಸಿದ್ದೆ. ಏಕೆ ಅವುಗಳನ್ನು ಪಾಲಿಸುತ್ತಿಲ್ಲವೇ?. ಎಂದರಲ್ಲದೆ ಇತ್ತೀಚಿನ ದಿನಗಳಲ್ಲಿ ಏಕೆ ರೈಲು ಅಪಘಾತಗಳು ಹೆಚ್ಚುತ್ತಿವೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೇ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.