ADVERTISEMENT

ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ₹5ಕ್ಕೆ ಊಟ: ಮಮತಾ ಬ್ಯಾನರ್ಜಿ ಚಾಲನೆ

ಮಾ ಯೋಜನೆಗೆ ಮಮತಾ ಬ್ಯಾನರ್ಜಿ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 13:25 IST
Last Updated 15 ಫೆಬ್ರುವರಿ 2021, 13:25 IST
ಮಮತಾ ಬ್ಯಾನರ್ಜಿ(ಪಿಟಿಐ ಚಿತ್ರ)
ಮಮತಾ ಬ್ಯಾನರ್ಜಿ(ಪಿಟಿಐ ಚಿತ್ರ)   

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡವರಿಗೆ ಅತೀ ಕಡಿಮೆ ವೆಚ್ಚದಲ್ಲಿ ಅಂದರೆ, ಕೇವಲ ₹5ಕ್ಕೆ ಊಟ ನೀಡುವ ‘ಮಾ’ ಯೋಜನೆಗೆ ಸೋಮವಾರ ವಿಡಿಯೊ ಮೂಲಕ ಚಾಲನೆ ನೀಡಿದರು.

ಒಂದು ಪ್ಲೇಟ್‌ ಅನ್ನ, ಬೇಳೆ, ತರಕಾರಿ ಮತ್ತು ಮೊಟ್ಟೆಸಾಂಬಾರ್ ₹5ಕ್ಕೆ ನೀಡಲಾಗುವುದು. ಪ್ರತಿ ಪ್ಲೇಟ್‌ ಊಟಕ್ಕೆ ರಾಜ್ಯ ಸರ್ಕಾರ ₹15 ಸಬ್ಸಿಡಿ ಮೊತ್ತವನ್ನು ಭರಿಸಲಿದೆ ಎಂದು ಅವರು ತಿಳಿಸಿದರು.

‘ಮಾ’ ಯೋಜನೆಯ ಅಡುಗೆಮನೆಗಳನ್ನು ಸ್ವಸಹಾಯ ಶಕ್ತಿ ಗುಂಪುಗಳು ನಿರ್ವಹಿಸಲಿವೆ. ಪ್ರತಿ ದಿನ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಊಟವನ್ನು ನೀಡಲಾಗುತ್ತದೆ. ರಾಜ್ಯದ ಎಲ್ಲ ಕಡೆಯೂ ‘ಮಾ’ ಯೋಜನೆಯ ಅಡುಗೆ ಮನೆಗಳನ್ನು ಆರಂಭಿಸಲಾಗುವುದು ಎಂದು ಮಮತಾ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.