ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರದ ‘ಕನ್ಯಾಶ್ರೀ’ ಯೋಜನೆಯು ಬ್ರ್ಯಾಂಡ್ ಆಗಿದ್ದು, ಈ ಯೋಜನೆ ಜಾರಿಯಾದ ದಿನವನ್ನೇ ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಇಡೀ ಜಗತ್ತೇ ಆಚರಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕನ್ಯಾ ಶ್ರೀ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದು 10ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ಮಾತನಾಡಿರುವ ಮಮತಾ, ಈ ಯೋಜನೆಯನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿರಬಹುದಾದ ಕಾರ್ಯಕ್ರಮವಾಗಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ 13 ರಿಂದ 19 ವರ್ಷಗಳ ಒಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡದಂತೆ ಷರತ್ತು ವಿಧಿಸಿ, ಬಾಲ್ಯ ವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರ ಪೋಷಣೆಗಾಗಿ ಹಣ ಜಮಾಣೆ ಮಾಡುವ ಕಾರ್ಯಕ್ರಮವೇ ‘ಕನ್ಯಾ ಶ್ರೀ’ ಯೋಜನೆಯಾಗಿದ್ದು, 2012ರಲ್ಲಿ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.
2017ರಲ್ಲಿ ‘ಕನ್ಯಾ ಶ್ರೀ’ ಯೋಜನೆಯು ಪ್ರಪಂಚದ ಹಲವು ದೇಶಗಳನ್ನು ಹಿಂದಿಕ್ಕಿ ಯುನೈಟೈಡ್ ನೇಷನ್ ಪಬ್ಲಿಕ್ ಸರ್ವಿಸ್(UNPSA) ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈ ಯೋಜನೆಗೆ ಸಂಗೀತ ಹಾಗೂ ಲೋಗೊ(ಚಿಹ್ನೆ) ಎರಡನ್ನೂ ಸ್ವತಃ ಸಿದ್ಧಪಡಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಸ್ವಾತ್ರಂತ್ರ್ಯಹೋರಾಟದಲ್ಲಿ ಬಂಗಾಳದ ಕೊಡುಗೆ ಅಪಾರವಾಗಿದೆ ಎಂದು ಉಲ್ಲೇಖಿಸಿದ ಬ್ಯಾನರ್ಜಿ, ರಾಜ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ನಾವು ಇತರರನ್ನು ಅಚ್ಚರಿಗೊಳಿಸುತ್ತೇವೆ ಎಂದರು.
ಬಂಗಾಳವು ಕೋಮು ಸೌಹಾರ್ದತೆಯ ಕೇಂದ್ರವಾಗಬೇಕು. ಈ ಮೂಲಕ ಎಲ್ಲಾ ಧರ್ಮಗಳ ಜನರು ಸಹಬಾಳ್ವೆಯ ಜೀವನ ನಡೆಸಬಹುದು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.